ಕರ್ತಾರ್ ಪುರ ಮಾತುಕತೆ ದಿನವೇ ಸಿದು ರಾಜೀನಾಮೆ; ಸಿಖ್ಖರ ಖಂಡನೆ

ಕರ್ತಾರ್ ಪುರ ಕಾರಿಡಾರ್ ಮಾತುಕತೆಯ ದಿನವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ವಿರುದ್ಧ ದೆಹಲಿ ಶಾಸಕ ಹಾಗೂ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖಂಡ ಮಣಿಂದರ್ ಸಿಂಗ್ ಸಿರ್ಸಾ ಕಿಡಿಕಾರಿದ್ದಾರೆ.
ಕರ್ತಾರ್ ಪುರ ಮಾತುಕತೆ ದಿನವೇ ಸಿದು ರಾಜೀನಾಮೆ; ಸಿಖ್ಖರ ಖಂಡನೆ
ಕರ್ತಾರ್ ಪುರ ಮಾತುಕತೆ ದಿನವೇ ಸಿದು ರಾಜೀನಾಮೆ; ಸಿಖ್ಖರ ಖಂಡನೆ
ನವದೆಹಲಿ: ಕರ್ತಾರ್ ಪುರ ಕಾರಿಡಾರ್ ಮಾತುಕತೆಯ ದಿನವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ವಿರುದ್ಧ ದೆಹಲಿ ಶಾಸಕ ಹಾಗೂ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖಂಡ ಮಣಿಂದರ್ ಸಿಂಗ್ ಸಿರ್ಸಾ ಕಿಡಿಕಾರಿದ್ದಾರೆ. 
ಟ್ವಿಟರ್ ನ ವಿಡಿಯೋ ಸಂದೇಶದಲ್ಲಿ ಅವರು, ರಾಜೀನಾಮೆ ನೀಡಲು ಇಂದಿನ ದಿನವನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕಿತ್ತು. ಇಂದು ಕೆಲಸದ ದಿನವಲ್ಲ, ಬದಲಿಗೆ ರಜಾದಿನ. ಅವರು ದೇಶದ ಗಮನವನ್ನು ಕರ್ತಾರ್ ಪುರ ಮಾತುಕತೆಯಿಂದ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
ಸಿದು ಅವರು ಕರ್ತಾರ್ ಪುರ ಕಾಡಿಡಾರ್ ಕುರಿತು ಭಾರತ-ಪಾಕ್ ನಾಯಕರು ಮಾತುಕತೆಯಲ್ಲಿ ತೊಡಗಿರುವಾಗಲೇ ರಾಜೀನಾಮೆ ಪ್ರಕಟಿಸಿದ್ದಾರೆ. ಇದು ದೇಶದ ಜನರನ್ನು ಇತರೆಡೆಗೆ ಸೆಳೆಯುವ ಸಂಚು. ಅವರು ಮತ್ತೊಮ್ಮೆ ಸಿಖ್ಖರ ವಿರುದ್ಧ ನಿಲುವು ಪ್ರಕಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com