ಸಾಂದರ್ಭಿಕ ಚಿತ್ರ
ದೇಶ
ಊಟ ಬಡಿಸದ ಕಾರಣಕ್ಕೆ ತಾಯಿಯನ್ನೆ ಕೊಂದ ಕುಡುಕ ಮಗ
ಊಟ ಬಡಿಸದ ಕಾರಣಕ್ಕೆ 28 ವರ್ಷದ ಕುಡುಕ ಮಗನೊಬ್ಬ ತನ್ನ 55 ವರ್ಷದ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ಜೆಮ್ ಷಡ್ ಪುರದಿಂದ 28 ಕಿಲೋ ಮೀಟರ್ ದೂರದಲ್ಲಿರುವ ಕುಲ್ದಿಯಾದಲ್ಲಿ ನಡೆದಿದೆ.
ಜೆಮ್ ಷಡ್ ಪುರ: ಊಟ ಬಡಿಸದ ಕಾರಣಕ್ಕೆ 28 ವರ್ಷದ ಕುಡುಕ ಮಗನೊಬ್ಬ ತನ್ನ 55 ವರ್ಷದ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ಜೆಮ್ ಷಡ್ ಪುರದಿಂದ 28 ಕಿಲೋ ಮೀಟರ್ ದೂರದಲ್ಲಿರುವ ಕುಲ್ದಿಯಾದಲ್ಲಿ ನಡೆದಿದೆ.
ಮದ್ಯವ್ಯಸನಿಯಾಗಿದ್ದ ಬಿಸ್ತು ಸಿಂಗ್ ಪ್ರತಿದಿನ ಮದ್ಯ ಸೇವಿಸಿ ಮನೆ ಹಾಗೂ ಹೊರಗಡೆ ಜಗಳವಾಡುತ್ತಿದ್ದ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ ಎಂದು ಪೊಲೀಸರು ಇಂದು ಹೇಳಿದ್ದಾರೆ.
ನಿನ್ನೆ ರಾತ್ರಿ ಮನೆಗೆ ಆಗಮಿಸಿದ ಕುಡುಕ ಸಿಂಗ್, ಊಟ ಬಡಿಸುವಂತೆ ತನ್ನ ತಾಯಿಯನ್ನು ಕೇಳಿದ್ದಾನೆ. ಆದರೆ , ಊಟ ಕೊಡಲು ತಾಯಿ ನಿರಾಕರಿಸಿದಾಗ ದೊಣ್ಣೆಯಿಂದಾಗಿ ಆಕೆಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ್ ಕೇವಾರ್ ವಿವರಿಸಿದ್ದಾರೆ.
ಆರೋಪಿಯನ್ನು ಬಂಧಿಸಿ , ದೊಣ್ಣೆಯನ್ನು ವಶ ಪಡಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ