ಮೊಟ್ಟೆ ಮತ್ತು ಕೋಳಿಯನ್ನು 'ಸಸ್ಯಹಾರಿ' ಎಂದು ಘೋಷಿಸಿ: ಶಿವಸೇನೆ ಸಂಸದ ಆಗ್ರಹ!

ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮೇಲ್ಮನೆಯಲ್ಲಿ ಮೊಟ್ಟೆ ಮತ್ತು ಕೋಳಿಯನ್ನು ಸಸ್ಯಹಾರಿ ಎಂದು ಘೋಷಿಸಿ ಎಂದು ಒತ್ತಾಯಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮೇಲ್ಮನೆಯಲ್ಲಿ ಮೊಟ್ಟೆ ಮತ್ತು ಕೋಳಿಯನ್ನು ಸಸ್ಯಹಾರಿ ಎಂದು ಘೋಷಿಸಿ ಎಂದು ಒತ್ತಾಯಿಸಿದ್ದಾರೆ.
ಚಿಕನ್ ಅನ್ನು ಸಸ್ಯಹಾರಿ ಎಂದು ಘೋಷಿಸಿ ಎಂದು ಸಂಜಯ್ ಹೇಳಿಕೆ ಬೆನ್ನಲ್ಲೇ ನೆಟಿಗರು ಟ್ರೋಲ್ ಮಾಡುತ್ತಿದ್ದು ಮಟನ್ ಮತ್ತು ಬೀಫ್ ಅನ್ನು ಸಸ್ಯಹಾರಿ ವಿಭಾಗಕ್ಕೆ ಸೇರಿಸಿ ಎಂದು ವ್ಯಂಗ್ಯವಾಡಿದ್ದಾರೆ.
ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ ಆಯುಷ್ಮನ್ ಸಚಿವಾಲಯ ಚಿಕನ್ ಯಾವ ವಿಭಾಗಕ್ಕೆ ಸೇರುತ್ತದೆಂದು ಸ್ಪಷ್ಟಪಡಿಸಬೇಕೆಂದು ಸಂಜಯ್ ರಾವತ್ ತಿಳಿಸಿದ್ದಾರೆ.  
ಆಯುರ್ವೇದಿಕ್ ಆಹಾರ ನೀಡಿದರೆ ಕೋಳಿಯೂ ಆಯುರ್ವೇದಿಕ್ ಮೊಟ್ಟೆಯನ್ನಿಡುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ ಎಂದು ಸಂಜಯ್ ರಾವತ್, ಇಂತ ಚಿಕನ್ ಪ್ರೋಟಿನ್ ಭರಿತವಾಗಿದ್ದರಿಂದ ಸಸ್ಯಹಾರಿಗಳೂ ಸೇವಿಸಬಹುದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com