ಎಲ್ ಜೆಪಿ ಸಂಸದ, ರಾಮ್ ವಿಲಾಸ್ ಪಾಸ್ವಾನ್ ಸೋದರ ರಾಮಚಂದ್ರ ಪಾಸ್ವಾನ್ ಇನ್ನಿಲ್ಲ, ರಾಷ್ಟ್ರಪತಿ, ಪ್ರಧಾನಿ ಸಂತಾಪ

ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಮುಖಂಡ, ಸಂಸದ ರಾಮಚಂದ್ರ ಪಾಸ್ವಾನ್ ಭಾನುವಾರ ಅಸುನೀಗಿದ್ದಾರೆ
Updated on
ನವದೆಹಲಿ: ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಮುಖಂಡ, ಸಂಸದ ರಾಮಚಂದ್ರ ಪಾಸ್ವಾನ್ ಭಾನುವಾರ ಅಸುನೀಗಿದ್ದಾರೆ
ದೀರ್ಘಕಾಲೀನ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ
ರಾಮಚಂದ್ರ ಪಾಸ್ವಾನ್ ಅವರು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸೋದರನಾಗಿದ್ದು, ಸಮಷ್ಟಿಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 
ರಾಮಚಂದ್ರ ಪಾಸ್ವಾನ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ
“ರಾಮಚಂದ್ರ ಪಾಸ್ವಾನ್ ನಿಧನದ ಸುದ್ದಿಯಿಂದ ದುಃಖವಾಗಿದೆ. ಬಿಹಾರ ಜನರ ಏಳಿಗೆಗಾಗಿ ಅವರು ಕಟಿಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯದ ಅಭಿವೃದ್ಧಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಕುಟುಂಬ ಸದಸ್ಯರು, ಬಂಧುಗಳು ಮತ್ತು ಸ್ನೇಹಿತರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ” ಎಂದು ರಾಷ್ಟ್ರಪತಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
"ರಾಮಚಂದ್ರ ಪಾಸ್ವಾನ್ ಬಡವರು ಮತ್ತು ದೀನ ದಲಿತರಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದರು. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಅವರು ರೈತರು ಮತ್ತು ಯುವಕರ ಹಕ್ಕುಗಳಿಗಾಗಿ ನಿಸ್ಸಂದಿಗ್ಧವಾಗಿ ಮಾತನಾಡುತ್ತಿದ್ದರು. ಅವರ ಸಾಮಾಜಿಕ ಸೇವಾ ಪ್ರಯತ್ನಗಳು ಗಮನಾರ್ಹವಾಗಿವೆ. ಅವರ ನಿಧನದಿಂದ ನೋವಾಗಿದ್ದು ಅವರ ಟುಂಬ ಮತ್ತು ಬೆಂಬಲಿಗರಿಗೆ ಆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಓಂ ಶಾಂತಿ, " ಎಂದು ಪ್ರಧಾನಿ ನರೇಂದ್ರ ಮೋದಿ  ಟ್ವೀಟ್ ನಲ್ಲಿ ಹೇಳಿದ್ದಾರೆ.
ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರು ಟ್ವೀಟ್ ನಲ್ಲಿ, "ನನ್ನ ಚಿಕ್ಕಪ್ಪ ಇನ್ನಿಲ್ಲ ಎಂದು ಭಾರವಾದ ಹೃದಯದಿಂದ ನಾನು ನಿಮಗೆ ತಿಳಿಸುತ್ತಿದ್ದೇನೆ. ಅವರು ಮಧ್ಯಾಹ್ನ 1: 24 ಕ್ಕೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು" ಎಂದು ಹೇಳಿದ್ದಾರೆ.
ಜುಲೈ 12 ರಂದು ಹೃದಯ ಸ್ತಂಭನದಿಂದ ಬಳಲುತ್ತಿದ್ದ ರಾಮ್ ಚಂದ್ರ ಪಾಸ್ವಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಮೃತರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com