'ಹಿಮಾದಾಸ್ ಗೆ ಸದ್ಗುರು ಅಭಿನಂದನೆ'ಯ ಟ್ವೀಟ್ ಗೆ ಆಕ್ಷೇಪ: ಆ ಟ್ವೀಟ್ ನಲ್ಲಿ ಅಂಥದ್ದೇನಿದೆ ಅಂತೀರಾ?: ಇಲ್ಲಿದೆ ಮಾಹಿತಿ

ಧಾರ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯಗಳಲ್ಲಿ ತೊಡಗಿ, ಅದ್ಭುತ ಇಂಗ್ಲೀಷ್ ಮಾತನಾಡಬಲ್ಲ ಮಂದಿ ಪೈಕಿ ಸದ್ಗುರು ಜಗ್ಗಿ ವಾಸುದೇವ್ ಖ್ಯಾತ ನಾಮರು.
'ಹಿಮಾದಾಸ್ ಗೆ ಸದ್ಗುರು ಅಭಿನಂದನೆ'ಯ ಟ್ವೀಟ್ ಗೆ ಆಕ್ಷೇಪ: ಆ ಟ್ವೀಟ್ ನಲ್ಲಿ ಅಂಥದ್ದೇನಿದೆ ಅಂತೀರಾ?: ಇಲ್ಲಿದೆ ಮಾಹಿತಿ
'ಹಿಮಾದಾಸ್ ಗೆ ಸದ್ಗುರು ಅಭಿನಂದನೆ'ಯ ಟ್ವೀಟ್ ಗೆ ಆಕ್ಷೇಪ: ಆ ಟ್ವೀಟ್ ನಲ್ಲಿ ಅಂಥದ್ದೇನಿದೆ ಅಂತೀರಾ?: ಇಲ್ಲಿದೆ ಮಾಹಿತಿ
Updated on
ಧಾರ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯಗಳಲ್ಲಿ ತೊಡಗಿ, ಅದ್ಭುತ ಇಂಗ್ಲೀಷ್ ಮಾತನಾಡಬಲ್ಲ ಮಂದಿ ಪೈಕಿ ಸದ್ಗುರು ಜಗ್ಗಿ ವಾಸುದೇವ್ ಖ್ಯಾತ ನಾಮರು. ಈಗ ಸದ್ಗುರು ಇಂಗ್ಲೀಷ್ ನಲ್ಲಿ ಮಾಡಿರುವ ಟ್ವೀಟ್ ಒಂದು ವೈರಲ್ ಆಗತೊಡಗಿದೆ. 
ಭಾರತಕ್ಕೆ ಸರಣಿ ಚಿನ್ನದ ಪದಗಳನ್ನು ಗೆದ್ದ ಕ್ರೀಡಾಪಟು ಹಿಮಾದಾಸ್ ಅವರಿಗೆ ಅಭಿನಂದನೆ ಸಲ್ಲಿಸಿ ಸದ್ಗುರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ಹಿಮಾದಾಸ್ ಚಿನ್ನದ ಪದಕ ಗೆದ್ದಿರುವುದನ್ನು ಗೋಲ್ಡನ್ ಶವರ್ (ಕನಕ  ವೃಷ್ಟಿ) ಎಂದು ಹೇಳಿದ್ದರು. 
ಆದರೆ ಇಂಗ್ಲೀಷ್ ನಲ್ಲಿ ಗೋಲ್ಡನ್ ಶವರ್ (Golden shower ) ಎಂಬ ಶಬ್ದಕ್ಕೆ ಬೇರೆಯದ್ದೇ ಅರ್ಥವಿದೆ ಎನ್ನುತ್ತಿದ್ದಾರೆ ಕೆಲವು ಟ್ವೀಟಿಗರು.
ಸದ್ಗುರು ಪ್ರಯೋಗಿಸಿರುವ ಶಬ್ದಕ್ಕೆ ಕೆಲವು ಮಂದಿ ಹೀಗೆ ವ್ಯಾಖ್ಯಾನ ಮಾಡುತ್ತಿದ್ದಾರೆ: ಗೋಲ್ಡನ್ ಶವರ್ ಎಂಬ ಶಬ್ದ ಲೈಂಗಿಕ ಸಂತೋಷಕ್ಕಾಗಿ ಓರ್ವ ವ್ಯಕ್ತಿಯ ಮೇಲೆ ಮೂತ್ರವಿಸರ್ಜನೆ ಮಾಡುವುದು ಎಂದಾಗುತ್ತದೆ. 
ಆದರೆ ಸದ್ಗುರು ಹಿಮಾದಾಸ್ ಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ಮಾಡಿರುವ ಟ್ವೀಟ್ ನಲ್ಲಿ ಸದ್ಭಾವನೆಯೇ ಇದ್ದರೂ, ಅದನ್ನು ಕನಕ ವೃಷ್ಟಿಯೆಂದೇ ಹೇಳಬಹುದಿತ್ತು. ಚಿನ್ನದ ಸುರಿಮಳೆಯನ್ನು ಕನಕ ವೃಷ್ಟಿ ಎಂದು ಹೇಳುವುದು ಭಾರತೀಯ ವಿಧಾನ ಆದ್ದರಿಂದ ಗೋಲ್ಡನ್ ಶವರ್ ಬದಲು ಕನಕ ವೃಷ್ಟಿಯೇ ಹೆಚ್ಚು ಸೂಕ್ತ ಎಂದು ಕೆಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ. 
ಇನ್ನೂ ಕೆಲವರು ಗೋಲ್ಡನ್ ಶವರ್ ಎನ್ನುವುದು ಒಳ್ಳೆಯ ಪದ, ಆದರೆ ಆ ಶಬ್ದದೊಂದಿಗೆ ಸಮಸ್ಯೆ ಇರುವುದು ಲೈಂಗಿಕತೆ ಬಗ್ಗೆ ಯೋಚನೆ ಮಾಡುವವರಿಗೇ ಹೊರತು ಧಾರ್ಮಿಕ ವ್ಯಕ್ತಿಗಳಿಗೆ ಅಲ್ಲ ಎಂದು ಮತ್ತಷ್ಟು ಜನ ಸದ್ಗುರು ಟ್ವೀಟ್ ನ್ನು ಬೆಂಬಲಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com