ಮನೀಶ್ ಸಿಸೋಡಿಯಾ
ದೇಶ
'ಸೂಪರ್ 30' ಚಿತ್ರ ತೆರಿಗೆ ಮುಕ್ತ, ದೆಹಲಿ ಶಾಲೆಗಳಿಗೆ ಆನಂದ್ ಕುಮಾರ್ 'ಗುರು'
ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವುದಾಗಿ ದೆಹಲಿಯ ಉಪ ಮುಖ್ಯಮಂತ್ರಿ....
ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವುದಾಗಿ ದೆಹಲಿಯ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಘೋಷಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ದೆಹಲಿ ಡಿಸಿಎಂ, 'ಸೂಪರ್ 30 ಸಂಸ್ಥೆಯ ಆನಂದ್ ಕುಮಾರ್ ಅವರು ತಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರ ಕೆಲಸ ಹಾಗೂ ವ್ಯಕ್ತಿತ್ವ ದೇಶದ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದೆ. ಬಡ ಮಕ್ಕಳೂ ಐಐಟಿ-ಜೆಎಎ ಕನಸನ್ನು ಸಾಧಿಸಲು ಇವರು ಪ್ರೇರಣೆಯಾಗಿದ್ದಾರೆ. ಅವರು ನಿಜವಾದ ಅರ್ಥದಲ್ಲಿ 'ಗುರು' ' ಎಂದಿದ್ದಾರೆ.
ಆನಂದ್ ಕುಮಾರ್ ಅವರು ದೆಹಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿ ತಿಂಗಳು ಒಂದು ತರಗತಿಯನ್ನು ನಡೆಸಲು ಒಪ್ಪಿಕೊಂಡಿರುವುದು ಸಂತಸದ ವಿಷಯ. ಇದು 11 ಹಾಗೂ 12 ತರಗತಿಗಳ ಮಕ್ಕಳಿಗೆ ಆನ್ ಲೈನ್ ಹಾಗೂ ಬೌಧಿಕ ತರಬೇತಿಯಾಗಿರಲಿದೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ