ಟಿಎಂಸಿ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ: ಪ.ಬಂಗಾಳಕ್ಕೆ ಬಾಂಗ್ಲಾ ಎಂದು ಮರುನಾಮಕರಣಕ್ಕೆ ಆಗ್ರಹ
ದೇಶ
ಟಿಎಂಸಿ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ: ಪ.ಬಂಗಾಳಕ್ಕೆ ಬಾಂಗ್ಲಾ ಎಂದು ಮರುನಾಮಕರಣಕ್ಕೆ ಆಗ್ರಹ
ತೃಣಮೂಲ ಕಾಂಗ್ರೆಸ್ ನ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಮನವಿ ಪತ್ರ ಸಲ್ಲಿಸಿದೆ.
ನವದೆಹಲಿ: ತೃಣಮೂಲ ಕಾಂಗ್ರೆಸ್ ನ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಮನವಿ ಪತ್ರ ಸಲ್ಲಿಸಿದೆ.
ಪಶ್ಚಿಮ ಬಂಗಾಳವನ್ನು ಬಾಂಗ್ಲಾ ಎಂದು ಮರು ನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾ ಎಂಬ ಹೆಸರನ್ನು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ದೀರ್ಘಕಾಲದಿಂದ ಇದೆ.
ಲೋಕಸಭಾ ಸಂಸದ ಸುದೀಪ್ ಬಂಡೋಪಾಧ್ಯಾಯ ನೇತೃತ್ವದ 12 ಸದಸ್ಯರ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿದ್ದು, ಕಾನೂನು ಜಾರಿ ಮಾಡುವ ಮೂಲಕ ಬಾಂಗ್ಲಾ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದೆ.
ರಾಜ್ಯಕ್ಕೆ ಮರುನಾಮಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರೆದಿರುವ ಪತ್ರಗಳನ್ನೂ ನಿಯೋಗ ಪ್ರಧಾನಿಗೆ ತಲುಪಿಸಿದೆ.

