ಕಾರ್ಗಿಲ್ ವಿಜಯೋತ್ಸಾವ: ಇಂದಿನ ಜಗತ್ತಿನಲ್ಲಿ ಆಧುನಿಕ ರಕ್ಷಣಾ ಪಡೆಗಳು ಅಗತ್ಯ- ಪ್ರಧಾನಿ ಮೋದಿ

ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಿಕೊಂಡರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on
ನವದೆಹಲಿ: ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ,  ಹುತಾತ್ಮ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಿಕೊಂಡರು.
ಕಾರ್ಗಿಲ್ ವಿಜಯ ನಮ್ಮ ದೇಶದ ಸುಪುತ್ರರು ಹಾಗೂ ಸುಪುತ್ರಿಯರ ಗೆಲುವು ಆಗಿದೆ. ಭಾರತದ ತಾಳ್ಮೆ ಹಾಗೂ ಬಲಕ್ಕೆ ಸಂದ ಗೆಲುವಾಗಿದೆ.ಶಿಸ್ತು ಹಾಗೂ ಸಂಯಮದ ವಿಜಯವಾಗಿದೆ.ಪ್ರತಿಯೊಬ್ಬರ ಭಾರತೀಯರ ನಿರೀಕ್ಷೆಗಳ ಗೆಲುವುವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು. 
20 ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧ ಭೂಮಿಗೆ ಭೇಟಿ ನೀಡಿದ್ದ ಬಗ್ಗೆ ನೆನಪು ಮಾಡಿಕೊಂಡ ಪ್ರಧಾನಿ, ಎತ್ತರದ ಶಿಖರಗಳಲ್ಲಿ  ಕುಳಿತು ಶತ್ರು ರಾಷ್ಟ್ರಗಳ ಸೈನಿಕರು ನಡೆಸುತ್ತಿದ್ದ ಗುಂಡಿನ ದಾಳಿ ಹಾಗೂ ಸಾವಿನ ಮುಖದಲ್ಲೂ ತ್ರಿವಣ ಧ್ವಜ ಹೊತ್ತ ನಮ್ಮ ಜವಾನರು  ಕಣಿವೆಯನ್ನು ತಲುಪಲು ಬಯಸುತ್ತಿದ್ದರು ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ನಮ್ಮ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರ ಕಲ್ಯಾಣಕ್ಕಾಗಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಹಲವು ದಶಕಗಳಿಂದ ನೆನೆಗುದಿಗೆ ಬಿದಿದ್ದ ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹುತಾತ್ಮ ಯೋಧರ ಮಕ್ಕಳಿಗೆ ಸ್ಕಾಲರ್ ಶಿಪ್ ಜಾರಿಗೊಳಿಸಲಾಗಿದೆ. ಸಶಸ್ತ್ರ ಯೋಧರಿಗಾಗಿ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. 
ಇಂದು ಬಾಹ್ಯಾಕಾಶದಲ್ಲಿ ಯುದ್ಧಗಳಾಗುತ್ತಿವೆ.  ಅಧುನಿಕ ರಕ್ಷಣಾ ಪಡೆ ಇಂದಿನ ಕಾಲಕ್ಕೆ ಅಗತ್ಯವಾಗಿರುವುದಲ್ಲದೇ , ಆದ್ಯತೆಯೂ ಆಗಿದೆ. ಆಧುನೀಕರಣವು ನಮ್ಮ ರಕ್ಷಣಾ ಪಡೆಗಳ ಗುರುತಾಗಿರಬೇಕು ಎಂದರು. 
ಯುದ್ಧದ ಸ್ವರೂಪ ಬದಲಾಗಿದೆ,  ಮಾನವೀಯತೆ ಮತ್ತು ಹುಸಿ ಯುದ್ಧಕ್ಕೆ  ಇಂದುಜಗತ್ತು  ಬಲಿಯಾಗಿದೆ, ಭಯೋತ್ಪಾದನೆ ಇಡೀ ಮಾನವಕುಲಕ್ಕೆ ಸವಾಲು ಹಾಕುತ್ತಿದೆ. ಯುದ್ಧದಲ್ಲಿ ಸೋಲನುಭವಿಸಿದವರು ತಮ್ಮ ರಾಜಕೀಯ ಉದ್ದೇಶಗಳನ್ನು ಪೂರೈಸಿಕೊಳ್ಳಲು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಟೀಕಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com