ಉತ್ತರಾಖಂಡ್ ಮುಖ್ಯಮಂತ್ರಿ
ದೇಶ
ಹಸುಗಳು ಆಮ್ಲ ಜನಕವನ್ನು ಬಿಡುಗಡೆ ಮಾಡುತ್ತವೆ: ಉತ್ತರಾಖಂಡ್ ಮುಖ್ಯಮಂತ್ರಿ
ಉತ್ತರಾಖಂಡ್ ಮುಖ್ಯಮಂತ್ರಿ ಹಸುಗಳ ಬಗ್ಗೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.
ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿ ಹಸುಗಳ ಬಗ್ಗೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.
ಹಸುಗಳು ಉಸಿರಾಡುವಾಗ ಆಮ್ಲಜಕ ಹೊರಹಾಕಲ್ಪಡುತ್ತದೆ ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ಜಾನುವಾರು ಮತ್ತು ಪಶುಸಂಗೋಪನಾ ತಜ್ಞರು ತಪ್ಪಾದ ಹೇಳಿಕೆ ಎಂದಿದ್ದಾರೆ.
ಗೋವಿನಲ್ಲಿರುವ ರೋಗನಿರೋಧಕ ಶಕ್ತಿಗಳ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ತ್ರಿವೇಂದ್ರ ಸಿಂಗ್ ರಾವತ್, ಗೋವುಗಳಿಂದ ಉಸಿರಾಟದ ಸಮಸ್ಯೆಯೂ ಕಡಿಮೆಯಾಗುತ್ತದೆ. ಗೋವುಗಳ ಸನಿಹದಲ್ಲಿದ್ದರೆ ಕ್ಷಯದಂತಹ ಅನೇಕ ರೋಗಗಳೂ ಸಹ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ತ್ರಿವೇಂದ್ರ ಸಿಂಗ್ ರಾವತ್ ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ಬಿಡುಗಡೆ ಮಾಡಿದ್ದು, ಉತ್ತರಾಖಂಡ್ ನ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಇದು ಸಾಮಾನ್ಯವಾದ ನಂಬಿಕೆಯಾಗಿದೆ. ಅದರ ಬಗ್ಗೆಯೇ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ