ಬಾಹ್ಯಾಕಾಶ ವಿಜ್ಞಾನ ಕುರಿತು ಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. mygov.in ವೆಬ್ಸೈಟ್ ಮೂಲಕ ಈ ಕ್ವಿಜ್ ಅನ್ನು ನಡೆಸಲಾಗುತ್ತದೆ. ಈ ಕ್ವಿಜ್ನಲ್ಲಿ ಗರಿಷ್ಠ ಅಂಕಗಳಿಸುವ ಶಾಲಾ ಮಕ್ಕಳಿಗೆ ಸೆಪ್ಟೆಂಬರ್ನಲ್ಲಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಇಳಿಯುವ ಸಂದರ್ಭದಲ್ಲಿ ಶ್ರೀಹರಿಕೋಟಕ್ಕೆ ಕರೆದೊಯ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿಸಲಾಗುವುದು ಎಂದು ಹೇಳಿದರು.
ಕ್ಯಾನ್ಸರ್ ಗೆದ್ದು, ಕ್ರೀಡಾ ಕೂಟದಲ್ಲಿ ಪದಕಕ್ಕೆ ಕೊರಳೊಡ್ಡಿದ ಪುಟಾಣಿಗಳಿಗೆ ಅಭಿನಂದನೆ:
ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್ಗೆ ತುತ್ತಾಗಿ, ಅದರ ವಿರುದ್ಧ ಹೋರಾಡಿ ಗೆದ್ದ ಭಾರತದ 10 ಮಕ್ಕಳನ್ನು ಪ್ರಧಾನಿ ನರೇಂದ್ರ ಮೋದಿ ಮನಃಪೂರ್ವಕವಾಗಿ ಅಭಿನಂದಿಸಿದರು. ರಷ್ಯಾದ ಮಾಸ್ಕೋದಲ್ಲಿ ಇಂತಹ ಮಕ್ಕಳಿಗಾಗಿ ನಡೆದ ಜಾಗತಿಕ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ರಾಷ್ಟ್ರದ ಕೀರ್ತಿಪತಾಕೆಯನ್ನು ಎತ್ತಿಹಿಡಿದಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.