ಧನೋವಾ ನಿವಾಸದ ಮುಂದೆ ರಫೇಲ್ ಮಾದರಿ, ಕಾಂಗ್ರೆಸ್ ನಿಂದ ವಾಯುಪಡೆ ಮುಖ್ಯಸ್ಥರ ಟ್ರೋಲ್?

ರಫೇಲ್‌ ಯುದ್ಧ ವಿಮಾನದ ಮೌಲ್ಯವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎನ್ನುವ ವಿಚಾರದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿರುವ ವಾಯುಪಡೆ...
ರಫೇಲ್ ಮಾದರಿ
ರಫೇಲ್ ಮಾದರಿ
ನವದೆಹಲಿ: ರಫೇಲ್‌ ಯುದ್ಧ ವಿಮಾನದ ಮೌಲ್ಯವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎನ್ನುವ ವಿಚಾರದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿರುವ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಅವರ ಅಧಿಕೃತ ನಿವಾಸದ ಮುಂದೆ ವಿವಾದಿತ ರಫೇಲ್ ಯುದ್ಧ ವಿಮಾನದ ಮಾದರಿಯೊಂದನ್ನು ನಿಲ್ಲಿಸಲಾಗಿದೆ.
ಕಾಂಗ್ರೆಸ್ ಪ್ರಧಾನ ಕಚೇರಿ ಎದುರಗಡೆ ವಾಯುಪಡೆ ಮುಖ್ಯಸ್ಥರ ನಿವಾಸ ಇದ್ದು, ಈ ಮುಂಚೆ ಈ ಸ್ಥಳದಲ್ಲಿ ಸುಖೋಯಿ ಎಸ್ ಯು-30 ವಿಮಾನದ ಮಾದರಿ ಇತ್ತು. ಇದೀಗ ಅದನ್ನು ತೆರವುಗೊಳಿಸಿ ರಫೇಲ್ ಯುದ್ಧ ವಿಮಾನದ ಮಾದರಿ ನಿಲ್ಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದು, ಈಗ ಕಾಂಗ್ರೆಸ್ ಕೇಂದ್ರ ಕಚೇರಿ ಎದುರೇ ರಫೇಲ್ ಮಾದರಿಯನ್ನು ನಿಲ್ಲಿಸಲಾಗಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಕಾಂಗ್ರೆಸ್ ನಾಯಕರು ಸಹ ವಾಯುಪಡೆ ಮುಖ್ಯಸ್ಥರನ್ನು ಟ್ರೋಲ್ ಮಾಡುವ ಸಾಧ್ಯತೆ ಇದೆ.
ರಫೇಲ್ ಯುದ್ಧ ವಿಮಾನವನ್ನು ವಾಯುಸೇನೆಯ ಗೋಲ್ಡನ್ ಆ್ಯರೋಸ್ 17 ಸ್ಕ್ವಾರ್ಡನ್‌ಗೆ ಹಸ್ತಾಂತರಿಸಲಿದ್ದು, ಕಾರ್ಗಿಲ್ ಯುದ್ಧದ ಸಮುಯದಲ್ಲಿ ಈ ವಿಭಾಗವನ್ನು ಬಿಎಸ್ ಧನೋವಾ ಮುನ್ನಡೆಸಿದ್ದರು. ಈ ಕಾರಣಕ್ಕೆ ಧನೋವಾ ಅವರ ಅಧಿಕೃತ ನಿವಾಸದ ಮುಂದೆ ರಫೆಲ್ ಯುದ್ಧ ವಿಮಾನದ ಮಾದರಿಯನ್ನು ನಿಲ್ಲಿಸಲಾಗಿದೆ ಎನ್ನಲಾಗಿದೆ.
ರಫೇಲ್ ಒಪ್ಪಂದದ ಪ್ರಕಾರ ಫ್ರಾನ್ಸ್ ಮೊದಲ ಹಂತದ ಯುದ್ಧ ವಿಮಾನಗಳನ್ನು ಸೆಪ್ಟೆಂಬರ್ ನಲ್ಲಿ ಹಸ್ತಾಂತರಿಸಲಿದೆ. ಪರೀಕ್ಷಾರ್ಥ ಹಾರಾಟದ ಬಳಿಕ ರಫೇಲ್ ಯುದ್ಧ ವಿಮಾನಗಳು 2020 ಮೇ ನಲ್ಲಿ ಅಧಿಕೃತವಾಗಿ ವಾಯುಸೇನೆ ಸೇರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com