ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ರವಾಸಿಗರನ್ನು ಉಳಿಸಲು ತನ್ನ ಜೀವವನ್ನೇ ಕಳೆದುಕೊಂಡ ಗೈಡ್ ರೌಫ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ!

ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿರುವ ಲಿಡ್ಡರ್ ನದಿಯಲ್ಲಿ ರಾಫ್ಟಿಂಗ್ ಗೆ ತೆರಳಿದ್ದವರ ದೋಣಿ ಮಗುಚಿ ಕೊಚ್ಚಿ ಹೋದ ಪ್ರವಾಸಿಗರನ್ನು ಉಳಿಸಲು ಪ್ರಯತ್ನಿಸಿ ಜೀವ...
Published on
ಶ್ರೀನಗರ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿರುವ ಲಿಡ್ಡರ್ ನದಿಯಲ್ಲಿ ರಾಫ್ಟಿಂಗ್ ಗೆ ತೆರಳಿದ್ದವರ ದೋಣಿ ಮಗುಚಿ ಕೊಚ್ಚಿ ಹೋದ ಪ್ರವಾಸಿಗರನ್ನು ಉಳಿಸಲು ಪ್ರಯತ್ನಿಸಿ ಜೀವ ಕಳೆದುಕೊಂಡ ರೌಫ್‌ ಅಹ್ಮದ್ ದರ್ ಕುಟಂಬಕ್ಕೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಶುಕ್ರವಾರ ಲಿಡ್ಡರ್ ನದಿಯಲ್ಲಿ ರಾಫ್ಟಿಂಗ್ ಮಾಡುತ್ತಿದ್ದ ವೇಳೆ ದೋಣಿ ಮಗುಚಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸಲು ಪ್ರಯತ್ನಿಸಿ ಪ್ರಾಣ ಕಳೆದುಕೊಂಡ ಪ್ರವಾಸಿ ಗೈಡ್ ರೌಫ್ ಅವರ ಶೌರ್ಯಕ್ಕೆ ರಾಜ್ಯಪಾಲ ಮಲಿಕ್ ಅವರು ನಮಿಸಿ ಗೌರವ ಸಲ್ಲಿಸಿದ್ದಾರೆ ಎಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ.
ಇತರರ ಜೀವ ಉಳಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ರೌಫ್ ಅವರು ನಿಜಜೀವನದ ಹೀರೊ ಎಂದು ಮಲಿಕ್ ಬಣ್ಣಿಸಿದ್ದಾರೆ. 
ದೇವರು, ಅಗಲಿದ ಆತ್ಮಕ್ಕೆ ಶಾಶ್ವತ ಶಾಂತಿ ಹಾಗೂ ಮೃತಪಟ್ಟವರ ಕುಟುಂಬಕ್ಕೆ ದುಃಖವನ್ನು ತಡೆಯುವ ಶಕ್ತಿ ನೀಡಲಿ ಎಂದು ರಾಜ್ಯಪಾಲರು ಪ್ರಾರ್ಥಿಸಿದ್ದಾರೆ.
ನಿಸ್ವಾರ್ಥ ಕಾರ್ಯದ ಅನುಕರಣೀಯ ಪ್ರದರ್ಶನವನ್ನು ಗೌರವಿಸಿ ರಾಜ್ಯಪಾಲರು ರೌಫ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com