ನಕಲಿ ವೆಬ್ ಸೈಟ್ ಸೃಷ್ಟಿಸಿ 15 ಲಕ್ಷ ಜನಕ್ಕೆ ವಂಚಿಸಿದ ಐಐಟಿ ಸ್ನಾತಕೋತ್ತರ ಪದವೀಧರನ ಬಂಧನ

ನಕಲಿ ವೆಬ್ ಸೈಟ್ ವೊಂದನ್ನು ಸೃಷ್ಟಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಿರುವ ಸಂಭ್ರಮದಲ್ಲಿ ಸರ್ಕಾರ ಉಚಿತ ಲ್ಯಾಪ್ ಟಾಪ್
ರಾಕೇಶ್ ಜಾಂಗಿಡ್
ರಾಕೇಶ್ ಜಾಂಗಿಡ್
ನವದೆಹಲಿ: ನಕಲಿ ವೆಬ್ ಸೈಟ್ ವೊಂದನ್ನು ಸೃಷ್ಟಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಿರುವ ಸಂಭ್ರಮದಲ್ಲಿ ಸರ್ಕಾರ ಉಚಿತ ಲ್ಯಾಪ್ ಟಾಪ್ ನೀಡುತ್ತಿದೆ ಎಂದು ಹೇಳಿ 15 ಲಕ್ಷ ಜನರಿಗೆ ವಂಚಿಸಿದ ಐಐಟಿ ಸ್ನಾತಕೋತ್ತರ ಪದವೀಧರನನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ರಾಜಸ್ಥಾನದ ನಾಗೂರ್ ಜಿಲ್ಲೆಯ ಪುಂಡ್ಲೋಟ ಗ್ರಾಮದ ರಾಕೇಶ್ ಜಾಂಗಿಡ್(23) ಎಂದು ಗುರುತಿಸಲಾಗಿದ್ದು, 2019ನೇ ಬ್ಯಾಚ್ ನ ಐಐಟಿ ಸ್ನಾತಕೋತ್ತರ ಪದವೀಧರ ಎಂದು ಪೊಲೀಸರು ಹೇಳಿದ್ದಾರೆ.
ರಾಕೇಶ್ ನಕಲಿ ವೆಬ್ ಸೈಟ್ ಮೂಲಕ ಎರಡೇ ದಿನದಲ್ಲಿ 15 ಲಕ್ಷ ಜನರಿಗೆ ವಂಚಿಸಿದ್ದಾರೆ. ಆತನ ನಕಲಿ ಲ್ಯಾಪ್ ಟಾಪ್ ಯೋಜನೆ, ವಾಟ್ಸ್ ಆಪ್, ಸಾಮಾಜಿಕ ತಾಣಗಳ ಮೂಲಕ ವೈರಲ್ ಆಗಿದ್ದು, ನಕಲಿ ವೆಟ್ ಸೈಟ್ ಗೆ, ಮೇಕ್ ಇಂಡಿಯಾ ಚಿಹ್ನೆ ಹಾಗೂ ಪ್ರಧಾನಿ ಮೋದಿ ಅವರ ಫೋಟೋವನ್ನು ಬಳಸಲಾಗಿದೆ.
ಉಚಿತ ಲ್ಯಾಪ್ ಟಾಪ್ ಗಾಗಿ ಲಕ್ಷಾಂತರ ಜನ ನೋಂದಣಿ ಮಾಡಿಕೊಂಡಿದ್ದು, ತಮ್ಮ ವೈಯಕ್ತಿಕ ವಿವರ ನೀಡಿದ್ದಾರೆ. ಆರೋಪಿ ಜನರ ವೈಯಕ್ತಿಕ ವಿವರ ದುರುಪಯೋಗಪಡಿಸಿಕೊಂಡು ಹಣ ಸಂಪಾದಿಸುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
www.modi-laptop.wishguruji.com ಎಂಬ ನಕಲಿ ವೆಬ್ ಸೈಟ್ ಬಗ್ಗೆ ಮಾಹಿತಿ ಪಡೆದ ದೆಹಲಿ ಸೈಬರ್ ಕ್ರೈಂ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆ ವೇಳೆ, ವೆಬ್ ಸೈಟ್ ಟ್ರಾಫಿಕ್ ಜಾಸ್ತಿಮಾಡಿ ಜಾಹೀರಾತಿನಿಂದ ಹಣ ಸಂಪಾದಿಸುವ ಉದ್ದೇಶದಿಂದ ಹೀಗೆ ಮಾಡಿದೆ ಎಂದು ಆರೋಪಿ ರಾಕೇಶ್ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com