6 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಶಂಕಿತ ಆರೋಪಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.
ಪೂರ್ವ ಬದ್ವಾನ್ ಜಿಲ್ಲೆಯಲ್ಲಿ ಶಂಕಿತ ಆರೋಪಿ ಕಾಮ್ರುಝಾಮನ್ ಸರ್ಕಾರ್ ನ್ನು ಬಂಧಿಸಲಾಗಿದ್ದು, ಸಿಸಿಟಿವಿ ಫುಟೇಜ್ ಸುಳಿವಿನಿಂದ ಶಂಕಿತನನ್ನು ಬಂಧಿಸುವುದಕ್ಕೆ ಸಾಧ್ಯವಾಗಿದೆ.
ಆರೋಪಿ ಕೆಂಪು-ಕಪ್ಪು ಬಣ್ಣದ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ, ಆತ ಅಪರಾಧ ಪಕರಣಗಳಲ್ಲಿ ಬಳಕೆ ಮಾಡಿದ್ದಾರೆ ಎನ್ನಲಾದ ಕಬ್ಬಿಣದ ರಾಡ್ ಹಾಗೂ ಚೈನ್ ವಾಹನದ ಹಿಂಬದಿಯಲ್ಲಿತ್ತು.
40-55 ವರ್ಷದ ಸಂತ್ರಸ್ತರು ಚೈನ್ ಹಾಗೂ ಕಬ್ಬಿಣದ ರಾಡ್ ನಿಂದ ಮೃತಪಟ್ಟಿರುವುದು ಖಾತ್ರಿಯಾಗಿದ್ದು, ಸಂತ್ರಸ್ತ ಮಹಿಳೆಯರು ಹತ್ಯೆಯಾಗುವುದಕ್ಕೂ ಮುನ್ನ ಲೈಂಗಿಕ ದೌರ್ಜನ್ಯ ಎದುರಿಸಿದ್ದರು ಎಂಬುದು ಮರಣೋತ್ತರ ವರದಿಯಿಂದ ಸ್ಪಷ್ಟವಾಗಿದೆ.