ರಾಷ್ಟ್ರೀಯ ಶಿಕ್ಷಣ ನೀತಿ ವರದಿ ಅಪ್ ಲೋಡ್ ಮಾಡುವಾಗ ಆಗಿರುವ ಪ್ರಮಾದದಿಂದ ಹಿಂದಿ ಭಾಷೆ ಹೇರಿಕೆ ವಿವಾದ?

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವಾಗ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವಾಗ ಪ್ರಮಾದ ನಡೆಯದಿದ್ದರೆ ಪ್ರಸ್ತಾವಿತ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದಿ ಭಾಷೆ ಹೇರಿಕೆ ಬಗ್ಗೆ ವಿವಾದವೇ ನಡೆಯುತ್ತಿರಲಿಲ್ಲವೇನೋ?
ರಾಷ್ಟ್ರೀಯ ಶಿಕ್ಷಣ ಕರಡು ನೀತಿಯನ್ನು 9 ಸದಸ್ಯರ ತಂಡ ತಯಾರಿಸಿದ್ದು ಅದರ ನೇತೃತ್ವವನ್ನು ಖ್ಯಾತ ವಿಜ್ಞಾನಿ ಕೆ ಕಸ್ತೂರಿರಂಗನ್ ವಹಿಸಿದ್ದರು. ಅದನ್ನು ಕಳೆದ ಶುಕ್ರವಾರ ಬಹಿರಂಗಗೊಳಿಸಲಾಗಿತ್ತು. ಅದು ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಆಡಳಿತ ಆರಂಭದ ಮೊದಲ ದಿನ. ಕರಡು ನೀತಿಯಲ್ಲಿರುವ ಪ್ರಕಾರ ಹಿಂದಿಯೇತರ ದಕ್ಷಿಣದ ರಾಜ್ಯಗಳಲ್ಲಿ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳ ಜೊತೆಗೆ ಹಿಂದಿಯನ್ನು ಕೂಡ ಮಕ್ಕಳಿಗೆ 7ನೇ ತರಗತಿಯವರೆಗೆ ಕಡ್ಡಾಯಗೊಳಿಸಬೇಕು ಎಂಬುದಾಗಿದೆ.
ಇದಕ್ಕೆ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ ಎಂದು ಶಿಫಾರಸ್ಸನ್ನು ಅರ್ಥ ಮಾಡಿಕೊಳ್ಳಲಾಗಿತ್ತು. ಆಗ ಪರಿಸ್ಥಿತಿಯನ್ನು ಶಾಂತಗೊಳಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಕರಡನ್ನು ಪರಿಷ್ಕೃತಗೊಳಿಸಿ ಶಾಲೆಗಳಲ್ಲಿ ಮಕ್ಕಳಿಗೆ ಭಾಷಾ ಕಲಿಕೆ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿತು.
ಆದರೆ ಪರಿಷ್ಕೃತ ಕರಡು ನೀತಿ ಪ್ರಕಟಣೆ ಬಗ್ಗೆ ಸಚಿವಾಲಯ ಯಾವುದೇ ಹೇಳಿಕೆ ನೀಡಿಲ್ಲ, ಮೊದಲ ಕರಡು ಪ್ರತಿ ಸೋರಿಕೆಯಾದ ನಂತರ ಪರಿಷ್ಕೃತ ನೀತಿ ವರದಿಯನ್ನು ಕಳೆದ ಜನವರಿಯಲ್ಲಿ ರಚಿಸಲಾಗಿತ್ತು. ಆಗ ಹಿಂದಿ ಭಾಷೆ ಹೇರಿಕೆ ಬಗ್ಗೆ ಸುದ್ದಿಗಳು ಹರಡಲಾರಂಭಿಸಿದ್ದವು. ಅಂತಹ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ದುರದೃಷ್ಟವಶಾತ್ ಪರಿಷ್ಕೃತ ಕರಡು ನೀತಿಯನ್ನು ಪ್ರಕಟಿಸುವ ಬದಲು ಮೊದಲ ಕರಡು ನೀತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿ ಪ್ರಮಾದವೆಸಗಿತ್ತು ಎನ್ನುತ್ತಾರೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು.
ಆಗಿರುವ ತಪ್ಪನ್ನು ಒಪ್ಪಿಕೊಳ್ಳಲು ಮುಜುಗರವಾಗಿದ್ದರಿಂದ ಹಿಂದಿ ಭಾಷೆ ಹೇರಿಕೆ ಬಗ್ಗೆ ಕೇಳಿಬಂದ ವಿವಾದ, ವಿರೋಧದಿಂದಾಗಿ ಕಳೆದ ಜನವರಿಯಲ್ಲಿಯೇ ತಿದ್ದಲಾಗಿದ್ದರೂ ಕೂಡ ಕರಡು ನೀತಿಯನ್ನು ಪರಿಷ್ಕರಿಸಲಾಗಿದೆ ಎಂದು  ಕಳೆದ ಸೋಮವಾರ ಪ್ರಕಟಿಸಿತು ಎನ್ನುತ್ತಾರೆ ಅಧಿಕಾರಿ.
ಕಳೆದ ಜನವರಿ 10ರಂದು ದೇಶದ ಎಲ್ಲಾ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ರಾಷ್ಟ್ರೀಯ ಶಿಕ್ಷಣ ಕರಡು ನೀತಿಯ ತಂಡ ಸಲಹೆ ನೀಡಿದ ನಂತರ ಅಂದಿನ ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವದೇಕರ್ ಟ್ವೀಟ್ ಮಾಡಿ, ಹೊಸ ಶಿಕ್ಷಣ ನೀತಿಯ ಕರಡು ವರದಿಯಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವುದನ್ನು ಶಿಫಾರಸು ಮಾಡಿಲ್ಲ ಎಂದು ಹೇಳಿದ್ದರು. ಕೆಲವು ಮಾಧ್ಯಮಗಳಲ್ಲಿ ತಪ್ಪು ವರದಿಗಳು ಪ್ರಕಟವಾದ ಕೂಡಲೇ ಸ್ಪಷ್ಟೀಕರಣ ನೀಡಬೇಕಾಗಿತ್ತು ಎನ್ನುತ್ತಾರೆ.
ಈ ಬಗ್ಗೆ ನಿನ್ನೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯಂ ಅವರನ್ನು ಸಂಪರ್ಕಿಸಿದಾಗ, ವೆಬ್ ಸೈಟ್ ನಲ್ಲಿ ಅನುಚಿತ ದೋಷವಾಗಿದ್ದು ನಂತರ ಅದನ್ನು ಸರಿಪಡಿಸಲಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com