ಪಿಒಕೆಯಲ್ಲಿ ಪಾಕ್ ನಿಂದ ಉಗ್ರರ ಕ್ಯಾಂಪ್ ಗೆ ಬೀಗ: ಭಾರತೀಯ ಸೇನಾ ಮುಖ್ಯಸ್ಥರು ಹೇಳಿದ್ದಿಷ್ಟು!
ದೇಶ
ಪಿಒಕೆಯಲ್ಲಿ ಪಾಕ್ ನಿಂದ ಉಗ್ರರ ಕ್ಯಾಂಪ್ ಗೆ ಬೀಗ: ಭಾರತೀಯ ಸೇನಾ ಮುಖ್ಯಸ್ಥರು ಹೇಳಿದ್ದಿಷ್ಟು!
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಉಗ್ರರ ಕ್ಯಾಂಪ್ ಗೆ ಬೀಗ ಹಾಕಿರುವ ವರದಿಯ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಉಗ್ರರ ಕ್ಯಾಂಪ್ ಗೆ ಬೀಗ ಹಾಕಿರುವ ವರದಿಯ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಕ್ಯಾಂಪ್ ನ್ನು ಎತ್ತಂಗಡಿ ಮಾಡಿರುವುದರ ಬಗ್ಗೆ ದೃಢವಾಗಿ ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಬಿಪಿನ್ ರಾವತ್ ಹೇಳಿದ್ದಾರೆ.
ಭಾರತೀಯ ಸೇನೆ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಿದೆ ಎಂದು ರಾವತ್ ತಿಳಿಸಿದ್ದಾರೆ. "ಪಾಕಿಸ್ತಾನ ಪಿಒಕೆಯಲ್ಲಿ ಉಗ್ರರ ಕ್ಯಾಂಪ್ ಗಳಿಗೆ ಬೀಗ ಜಡಿದಿದೆ ಎಂಬುದನ್ನು ದೃಢಪಡಿಸಲು ಯಾವುದೇ ಮಾರ್ಗಗಳಿಲ್ಲ. ಆದರೆ ಗಡಿ ಭಾಗಗಳಲ್ಲಿ ನಮ್ಮ ಸೇನೆಯ ಕಟ್ಟೆಚ್ಚರ ಮುಂದುವರೆಯಲಿದೆ ಎಂದು ರಾವತ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ