ಸಾಂಜಿ ರಾಮ್
ಸಾಂಜಿ ರಾಮ್

ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಮಾಸ್ಟರ್ ಮೈಂಡ್ ಸಾಂಜಿ ರಾಮ್ ಸೇರಿ 6 ಆರೋಪಿಗಳು ದೋಷಿ

ಜಮ್ಮು ಕಾಶ್ಮೀರ ಸೇರಿ ದೇಶಾದ್ಯಂತ ಸುದ್ದಿಯಾಗಿದ್ದ ಕಥುವಾ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳು ದೋಷಿಗಳೆಂದು ಪಠಾಣ್ ಕೋಟ್ ನ್ಯಾಯಾಲಯ ಇಂದು ತಿರ್ಪಿತ್ತಿದೆ.
ನವದೆಹಲಿ: ಜಮ್ಮು ಕಾಶ್ಮೀರ ಸೇರಿ ದೇಶಾದ್ಯಂತ ಸುದ್ದಿಯಾಗಿದ್ದ ಕಥುವಾ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳು ದೋಷಿಗಳೆಂದು ಪಠಾಣ್ ಕೋಟ್ ನ್ಯಾಯಾಲಯ ಇಂದು ತಿರ್ಪಿತ್ತಿದೆ.
ಗ್ರಾಮದ ಮುಖ್ಯಸ್ಥ ಸಾಂಜಿ ರಾಮ್, ಅವರ ಪುತ್ರ ವಿಶಾಲ್, ಎರಡು ವಿಶೇಷ ಪೊಲೀಸ್ ಅಧಿಕಾರಿಗಳಾದ  ದೀಪಕ್ ಖಜಾರಿಯಾ ಮತ್ತು ಸುರೇಂದರ್ ವರ್ಮಾ  ಹಾಗೂ ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಅವರನ್ನು ಪಠಾಣ್ ಕೋಟ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ.
ಅಲೆಮಾರಿ ಮುಸ್ಲಿಂ ಜನಾಂಗಕ್ಕೆ ಸೇರಿದ್ದ ಎಂಟು ವರ್ಷ ವಯಸ್ಸಿನ ಬಾಲಕಿಯನ್ನು ಕಳೆದ ವರ್ಷ ಜನವರಿ 10 ರಂದು ಅಪಹರಿಸಿ,ಅತ್ಯಾಚಾರ ನಡೆಸಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿತ್ತು.ಏಪ್ರಿಲ್ 2018ರಲ್ಲಿ ಏಳು ಆರೋಪಿಗಳನ್ನು ಬಂಧಿಸಿ ವಿಚಾರಣೆ ಪ್ರಾರಂಭಿಸಲಾಗಿತ್ತು.ಈ ವಿಚಾರಣೆ ಕಳೆದ ಜೂನ್ ಜೂನ್ 3 ರಂದು ಕೊನೆಗೊಂಡು ಸೋಮವಾರ ತೀರ್ಪು ಪ್ರಕಟವಾಗಿದೆ.
ಕೃತ್ಯದಲ್ಲಿ ಬಾಗಿಯಾಗಿದ್ದ ಇನ್ನೋರ್ವ ಅಪರಾಧಿ ವಯಸ್ಸು ಇನ್ನೂ ಖಚಿತವಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಅವನ ವಯಸ್ಸಿನ ಕುರಿತಂತೆ ಅರ್ಜಿ ವಿಚಾರಣೆ ನಡೆಸುತ್ತಿರುವ ಕಾರಣ ಬಾಲಾಪರಾಧಿಯ ವಿಚಾರಣೆ ಇನ್ನೂ ಪ್ರಾರಂಭವಾಗಿರುವುದಿಲ್ಲ.
ಅಪರಾಧ ದಳದ ಪೋಲೀಸರು ಐವರು ಆರೊಪಿಗಳನ್ನು ಬಂಧಿಸಿದ್ದರು. ಸಾಂಜಿ ರಾಮ್ ನಿಂದ ಅಕ್ರಮವಾಗಿ  4 ಲಕ್ಷ ರೂ.ಪಡೆದು ನಿರ್ಣಾಯಕ ಸಾಕ್ಷಿಗಳನ್ನು ನಾಶಪಡಿಸಿದ್ದ ಸಬ್ ಇನ್ಸ್ಪೆಕ್ಟರ್ ಆನಂದ್ ದತ್ತಾ ಹಾಗೂ ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್  ಅವರನ್ನೂ ಅಪರಾಧ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕ ಹೊರತಾಗಿ ಉಳಿದ ಆರೋಪಿಗಳೆಲ್ಲರೂ ಪ್ರಸ್ತುತ ಪಂಜಾಬ್ ನ ಗುರುದಾಸ್ಪುರ್ ಜೈಲಿನಲ್ಲಿದ್ದಾರೆ

Related Stories

No stories found.

Advertisement

X
Kannada Prabha
www.kannadaprabha.com