'ಸೆಲ್ಫಿ ವಿತ್ ಡಾಟರ್'ಅಭಿಯಾನಕ್ಕೆ ಮೇವಾಟ್ ಬಾಲಕಿ; ಜೂನ್ 28ರಂದು ಘೋಷಣೆ

ಹರ್ಯಾಣ ರಾಜ್ಯದ ಹಿಂದುಳಿದ ಮುಸ್ಲಿಂ ಜನಾಂಗದವರು ಅಧಿಕವಾಗಿರುವ ಮೇವತ್ ಜಿಲ್ಲೆಯ ಬಾಲಕಿ ...
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಚಂಡೀಗಢ: ಹರ್ಯಾಣ ರಾಜ್ಯದ ಹಿಂದುಳಿದ ಮುಸ್ಲಿಂ ಜನಾಂಗದವರು ಅಧಿಕವಾಗಿರುವ ಮೇವತ್ ಜಿಲ್ಲೆಯ ಬಾಲಕಿ ಕೇಂದ್ರ ಸರ್ಕಾರದ ಸೆಲ್ಫಿ ವಿತ್ ಡಾಟರ್ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾಳೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿರುವ ಅಭಿಯಾನ ನಾಲ್ಕು ವರ್ಷಗಳನ್ನು ಪೂರೈಸಿದೆ.
ಸೆಲ್ಫಿ ವಿತ್ ಡಾಟರ್ ಅಭಿಯಾನದ ಹಿಂದಿನ ರೂವಾರಿ ಹರ್ಯಾಣದ ಜಿಂದ್ ಜಿಲ್ಲೆಯ ಬಿಬಿಪುರ್ ಗ್ರಾಮದ ಸುನಿಲ್ ಜಗ್ಲನ್. ಇಂದು ಮೇವತ್ ನಲ್ಲಿ ಸೆಲ್ಫಿ ವಿತ್ ಡಾಟರ್ ಅಭಿಯಾನವನ್ನು ಆಚರಿಸುತ್ತಿದ್ದು ಸುಮಾರು 250 ಬಾಲಕಿಯರು ಭಾಗವಹಿಸುತ್ತಿದ್ದಾರೆ.
ಈ ಅಭಿಯಾನಕ್ಕೆ ಸಂಬಂಧಪಟ್ಟಂತೆ ಅರ್ಜಿಗಳನ್ನು ನೀಡಲಾಗುತ್ತಿದ್ದು ನಿನ್ನೆಯಿಂದ ಅದು ಶಾಲಾ, ಕಾಲೇಜುಗಳಲ್ಲಿ ಸಿಗುತ್ತದೆ. ಜೂನ್ 20ರ ಹೊತ್ತಿಗೆ ಎಲ್ಲಾ ಅರ್ಜಿ ಫಾರಂಗಳನ್ನು ಪಡೆದು ನಂತರ ಅವುಗಳನ್ನು ಅಖೈರುಗೊಳಿಸಿ ಆಯ್ಕೆ ತಂಡ ಒಬ್ಬ ಬಾಲಕಿಯನ್ನು ಆಯ್ಕೆ ಮಾಡಿ ಜೂನ್ 28ರಂದು ಬ್ರಾಂಡ್ ಅಂಬಾಸಿಡರ್ ಯಾರಾಗುತ್ತಾರೆ ಎಂದು ಘೋಷಿಸಲಾಗುತ್ತದೆ. ಅಂದು ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಘೋಷಿಸಲಿದ್ದಾರೆ. ನಂತರ ಅಭಿಯಾನ ದೇಶಾದ್ಯಂತ ಮುಂದುವರಿಯಲಿದೆ. ಬಾಲಕಿಯು ಮಹಿಳಾ ವಿಷಯಗಳನ್ನು ತ್ರಿವಳಿ ತಲಾಖ್ ಮತ್ತು ಬುರ್ಖಾ ಧರಿಸುವ ಬಗ್ಗೆ ಮಾತನಾಡುತ್ತಾಳೆ ಎಂದರು.
ಅಭಿಯಾನದಲ್ಲಿ ಭಾಗಿಯಾಗುವ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ತಮ್ಮ ಹೆಣ್ಣು ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಲ್ಲಿಗೆ ಈ ಅಭಿಯಾನ ಮುಗಿಯುವುದಿಲ್ಲ, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಅವರಿಗೆ ಆರ್ಥಿಕ ಸ್ವಾತಂತ್ರ್ಯ, ಲಿಂಗ ಸಮಾನತೆ ಬಗ್ಗೆ ಕೂಡ ಅಭಿಯಾನ ಒಳಗೊಂಡಿರುತ್ತದೆ ಎಂದು ಜಗ್ಲನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com