ನಿತೀಶ್ ಗೆ ಮುಜುಗರ ತರುವುದು ನನಗಿಷ್ಟವಿಲ್ಲ, ಅದಕ್ಕಾಗಿ ರಾಜಿನಾಮೆ: ಜೆಡಿಯು ವಕ್ತಾರ ಅಜಯ್ ಅಲೋಕ್

ಜೆಡಿಯು ಮುಖಂಡ ಫೈರ್ ಬ್ಯಾಂಡ್ ಖ್ಯಾತಿಯ ಅಜಯ್ ಅಲೋಕ್ ವಕ್ತಾರ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಮುಜುಗರ ...
ಅಜಯ್ ಅಲೋಕ್
ಅಜಯ್ ಅಲೋಕ್
Updated on
ಪಾಟ್ನಾ: ಜೆಡಿಯು ಮುಖಂಡ ಫೈರ್ ಬ್ಯಾಂಡ್ ಖ್ಯಾತಿಯ ಅಜಯ್ ಅಲೋಕ್ ವಕ್ತಾರ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಮುಜುಗರ ಅನುಭವಿಸುವುದು ನಮಗೆ ಬೇಕಿಲ್ಲ ಹೀಗಾಗಿ  ರಾಜಿನಾಮೆ ನೀಡಿದ್ದಾಗಿ ಅಲೋಕ್ ಅಜಯ್ ಹೇಳಿದ್ದಾರೆ.
ಅಲೋಕ್ ಅಜಯ್ ಜೆಡಿಯು ಪಕ್ಷದಲ್ಲಿ ಹೆಚ್ಚು ಜನಪ್ರಿಯವಾಗಿದ್ದವರು ಅಲೋಕ್, ತಮ್ಮ ರಾಜಕೀಯ ಗುರು, ನಿತೀಶ್ ಅವರಿಗೆ ಮುಜುಗರ ಉಂಟು ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. 
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಾಂಗ್ಲಾ ವಲಿಸಿಗರ ವಿರುದ್ಧ ಮಾತನಾಡಿದ್ದರಿಂದ ನಿತೀಶ್ ಕುಮಾರ್ ಅಪ್ ಸೆಟ್ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷಕ್ಕಾಗಿ ನಾನು ಉತ್ತಮ ಕೆಲಸ ಮಾಡುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ, ಹೀಗಾಗಿ  ನಾನು ರಾಜಿನಾಮೆ ನೀಡುತ್ತಿದ್ದು, ಅದನ್ನು ಒಪ್ಪಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com