ಬಿಪ್ಲಾಬ್ ಕುಮಾರ್ ದೇಬ್
ದೇಶ
ತ್ರಿಪುರ ಸಿಎಂ ಕುರಿತು 'ನಕಲಿ ಸುದ್ದಿ': ಆರೋಪಿಗೆ ಎರಡು ದಿನಗಳ ಕಾಲ ಪೋಲೀಸ್ ಕಸ್ಟಡಿ
ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರ ವೈಯಕ್ತಿಕ ಜೀವನದ ಬಗ್ಗೆ "ನಕಲಿ ಸುದ್ದಿ" ಪೋಸ್ಟ್ ಮಾಡಿದ ಆರೋಪದ ಮೇಲೆವ್ಯಕ್ತಿಯೊಬ್ಬನನ್ನು ಬಂಧಿಸಿ....
ಅಗರ್ತಲಾ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರ ವೈಯಕ್ತಿಕ ಜೀವನದ ಬಗ್ಗೆ "ನಕಲಿ ಸುದ್ದಿ" ಪೋಸ್ಟ್ ಮಾಡಿದ ಆರೋಪದ ಮೇಲೆವ್ಯಕ್ತಿಯೊಬ್ಬನನ್ನು ಬಂಧಿಸಿ ದಾಖಲೆಗಳನ್ನು ನಕಲಿ ಮಾಡಿದ ಆರೋಪದ ಮೇಲೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಏಪ್ರಿಲ್ 26 ರಿಂದ ಪರಾರಿಯಾಗಿದ್ದ ಅನುಪಮ್ ಪಾಲ್ ನನ್ನು ನವದೆಹಲಿಯಲ್ಲಿ ತ್ರಿಪುರ ಪೊಲೀಸರ ಅಪರಾಧ ವಿಭಾಗ ಬುಧವಾರ ಬಂಧಿಸಿದೆ. ಏಪ್ರಿಲ್ 25 ರ ಫೇಸ್‌ಬುಕ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಪೊಲೀಸರು ಖೋಟಾ, ಮೋಸ ಮತ್ತು ಪಿತೂರಿಗಾಗಿ .ಪಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

