ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಓಡಿಹೋಗಿದ್ದ ನವವಧು ಸಲಿಂಗಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ಪ್ರತ್ಯಕ್ಷ

ಮದುವೆ ನಂತರ ಓಡಿ ಹೋಗಿದ್ದ ರಾಜಸ್ಥಾನದ ಯುವತಿ 23 ದಿನಗಳ ನಂತರ ತನ್ನ ಸಲಿಂಗಕಾಮಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ವಾಸಿಸುತ್ತಿರುವುದು...
Published on
ಜೈಪುರ: ಮದುವೆ ನಂತರ ಓಡಿ ಹೋಗಿದ್ದ ರಾಜಸ್ಥಾನದ ಯುವತಿ 23 ದಿನಗಳ ನಂತರ ತನ್ನ ಸಲಿಂಗಕಾಮಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಶಹಜಾನಪುರದ ನಿವಾಸಿಯೊಬ್ಬರು, ಮದುವೆ ನಂತರ ದಿಢೀರ್ ನಾಪತ್ತೆಯಾಗಿದ್ದ ಪತ್ನಿಯ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಹರಿಯಾಣದ ಮನೆಸರ್ ದಲ್ಲಿ ನವ ವಧುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 1ರಂದು ಪತಿಯನ್ನು ತೊರೆದಿದ್ದ ಯುವತಿ, ರಾಷ್ಟ್ರೀಯ ಆಟಗಾರ್ತಿ ಸಲಿಂಗಕಾಮಿ ಗೆಳತಿಯೊಂದಿಗೆ ವಾಸಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಈ ಇಬ್ಬರು ಸಂಬಂಧದಲ್ಲಿದ್ದರು ಎನ್ನಲಾಗಿದೆ.
ಪೊಲೀಸರು ಸಲಿಂಗಕಾಮಿಗಳಿಬ್ಬರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದು, ನಾವು ವಯಸ್ಕರಾಗಿದ್ದು, ನಮ್ಮ ಇಚ್ಛೆಗೆ ತಕ್ಕಂತೆ ಬದುಕುವ ಹಕ್ಕ ನಮಗಿದೆ ಎಂದು ವಾದಿಸಿದ್ದಾರೆ. ನನಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಓಡಿಹೋದ ನವವಧು ಹೇಳಿದ್ದಾರೆ.
ವಿಚಾರಣೆ ಬಳಿಕ ಸಲಿಂಗಿ ಜೋಡಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com