ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ, ಜಾಮೀನು ಪಡೆದವರು ಖುಷಿಯಾಗಿರಲಿ: ಕಾಂಗ್ರೆಸ್ ಗೆ ಪ್ರಧಾನಿ ಮೋದಿ ಟಾಂಗ್

ಹಗರಣಗಳ ಆರೋಪ ಎದುರಿಸುತ್ತಿರುವವರನ್ನು ಇನ್ನೂ ಯಾಕೆ ಜೈಲಿಗೆ ಕಳಿಸಿಲ್ಲ ಎಂದು ಕೆಲವರು ನಮ್ಮನ್ನು ಟೀಕಿಸುತ್ತಿದ್ದಾರೆ, ಇದು ಯಾರನ್ನು ಬೇಕಾದರೂ ಏಕಾ ಏಕಿ ಜೈಲಿಗೆ ತಳ್ಳಲು ತುರ್ತು ಪರಿಸ್ಥಿತಿಯಲ್ಲ
ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ, ಜಾಮೀನು ಪಡೆದವರು ಖುಷಿಯಾಗಿರಲಿ: ಕಾಂಗ್ರೆಸ್ ಗೆ  ಪ್ರಧಾನಿ ಮೋದಿ ಟಾಂಗ್
ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ, ಜಾಮೀನು ಪಡೆದವರು ಖುಷಿಯಾಗಿರಲಿ: ಕಾಂಗ್ರೆಸ್ ಗೆ ಪ್ರಧಾನಿ ಮೋದಿ ಟಾಂಗ್
Updated on
ನವದೆಹಲಿ: ಹಗರಣಗಳ ಆರೋಪ ಎದುರಿಸುತ್ತಿರುವವರನ್ನು ಇನ್ನೂ ಯಾಕೆ ಜೈಲಿಗೆ ಕಳಿಸಿಲ್ಲ ಎಂದು ಕೆಲವರು ನಮ್ಮನ್ನು ಟೀಕಿಸುತ್ತಿದ್ದಾರೆ, ಇದು ಯಾರನ್ನು ಬೇಕಾದರೂ ಏಕಾ ಏಕಿ ಜೈಲಿಗೆ ತಳ್ಳಲು ತುರ್ತು ಪರಿಸ್ಥಿತಿಯಲ್ಲ  ಎಂದು ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ಸಂಸತ್ ನಲ್ಲಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. 
ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಜೂ.25 ರಂದು ಲೋಕಸಭೆಯಲ್ಲಿ ಉತ್ತರ ನೀಡಿದ ಪ್ರಧಾನಿ,  ಕಾಂಗ್ರೆಸ್ ನಾಯಕ ಅಧೀರ್ ರಂಜನ್  ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದು, ನಾವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತೇವೆ, ಯಾರನ್ನು ಬೇಕಾದರೂ  ಜೈಲಿಗೆ ತಳ್ಳುವುದಕ್ಕೆ ಇದು ತುರ್ತುಪರಿಸ್ಥಿತಿಯಲ್ಲ  ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ, ಜಾಮೀನು ಪಡೆದವರು ಖುಷಿಯಾಗಿರಲಿ ಎಂದು ಹೇಳಿದ್ದಾರೆ.  ಪ್ರಧಾನಿ ಮೋದಿ ಅವರು ಯುಪಿಎ ಅಧಿಕಾರಾವಧಿಯಲ್ಲಿ ನಡೆದ ಹಗರಣಗಳ ಆರೋಪಿಗಳನ್ನೇಕೆ ಜೈಲಿಗೆ ಕಳಿಸಿಲ್ಲ ಎಂದು ಸಂಸತ್ ನಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ವ್ಯಂಗ್ಯವಾಗಿ ಪ್ರಶ್ನಿಸಿದ್ದರು.
ಇದೇ ವೇಳೆ ತಮ್ಮ ಸರ್ಕಾರದ 'ನವ ಭಾರತ'  ದೃಷ್ಟಿಕೋನವನ್ನು ಎತ್ತಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಜನ ಸುರಕ್ಷಿತ, ಸುಭದ್ರ ಮತ್ತು ಅಂತರ್ಗತ ಭಾರತವನ್ನು ಬಯಸಿದ್ದಾರೆ. ಹೀಗಾಗಿಯೇ ಬಿಜೆಪಿಗೆ ಹಲವು ದಶಕಗಳ ನಂತರ ಪ್ರಬಲವಾದ ಜನಾದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.  ಹಲವು ದಶಕಗಳ ನಂತರ, ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಇಂತಹ ಪ್ರಬಲವಾದ ಜನಾದೇಶ ಲಭಿಸಿದೆ. ಮತದಾರರು ಇಂದು ಎಚ್ಚರವಾಗಿದ್ದಾರೆ ಮತ್ತು ಅವರ ಅರಿವು ಪ್ರಶಂಸನೀಯವಾಗಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಯಾರನ್ನೂ ಹೊಂದಿಲ್ಲದ ಜನ, ಸರ್ಕಾರವನ್ನು ಬೆಂಬಲಿಸಿದ್ದಾರೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಯಾರು ಗೆದ್ದರು ಮತ್ತು ಯಾರು ಸೋತರು ಎಂಬ ದೃಷ್ಟಿಯಿಂದ ಚುನಾವಣೆಗಳ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಅವರು ಹೇಳಿದರು.
2014 ರಲ್ಲಿ, ನಮ್ಮ ಸರ್ಕಾರವು ಒಂದು ಪ್ರಯೋಗವಾಗಿತ್ತು, ಆದರೆ ಜನ ನಮ್ಮನ್ನು ಅಳತೆ ಮಾಡಿ 2019ರಲ್ಲಿ ನಮಗೆ ಸಂಪೂರ್ಣವಾಗಿ ಜನಾದೇಶ ನೀಡಿದ್ದಾರೆ ಎಂದು ಮೋದಿ ಹೇಳಿದರು. ಇದು ದೇಶದ ಜನಕ್ಕಾಗಿ ನಮ್ಮ ಕಠಿಣ ಶ್ರಮ ಮತ್ತು ಸಮರ್ಪಣೆಯ ಫಲ ಎಂದ ಅವರು, ಯಶಸ್ವಿ ಅಧಿವೇಶನಕ್ಕಾಗಿ ಸ್ಪೀಕರ್‌ ಬಿರ್ಲಾ ಅವರಿಗೆ ಧನ್ಯವಾದ ಅರ್ಪಿಸಿದರು.
ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಬಿಜೆಡಿ ಮುಖಂಡ ಪಿನಾಕಿ ಮಿಶ್ರಾ, ಟಿಡಿಪಿಯ ಜಯದೇವ್ ಗಲ್ಲಾ, ಶಿವಸೇನೆಯ ವಿನಾಯಕ್ ರಾವ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ಬಿಜೆಪಿಯ ಪ್ರತಾಪ್ ಚಂದ್ರ ಸಾರಂಗಿ ಮತ್ತು ಹೀನಾ ಗವಿತ್ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com