ಮರಾಠರಿಗೆ ಮೀಸಲಾತಿ ಕೊಟ್ಟಿದ್ದು ಸರಿ, ಆದರೆ ಶೇ.16 ರಷ್ಟು ಬೇಕಿಲ್ಲ: ಬಾಂಬೆ ಹೈಕೋರ್ಟ್
ಮರಾಠರಿಗೆ ಮೀಸಲಾತಿ ಕೊಟ್ಟಿದ್ದು ಸರಿ, ಆದರೆ ಶೇ.16 ರಷ್ಟು ಬೇಕಿಲ್ಲ: ಬಾಂಬೆ ಹೈಕೋರ್ಟ್

ಮರಾಠರಿಗೆ ಮೀಸಲಾತಿ ಕೊಟ್ಟಿದ್ದು ಸರಿ, ಆದರೆ ಶೇ.16 ರಷ್ಟು ಸರಿಯಲ್ಲ: ಬಾಂಬೆ ಹೈಕೋರ್ಟ್

ಮರಾಠರಿಗೆ ಅಲ್ಲಿನ ಸರ್ಕಾರ ಮೀಸಲಾತಿ ನೀಡಿದ್ದನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.
ಬಾಂಬೆ: ಮರಾಠರಿಗೆ ಅಲ್ಲಿನ ಸರ್ಕಾರ ಮೀಸಲಾತಿ ನೀಡಿದ್ದನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. 
ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಸರಿ ಆದರೆ ಶೇ.16 ರಷ್ಟು ಮೀಸಲಾತಿ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಮರಾಠ ಸಮುದಾಯಕ್ಕೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.12 ರಷ್ಟು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಶೇ.13 ಮೀಸಲಾತಿ ನೀಡಬಹುದೆಂದು ಹೇಳಿದೆ.
ಮಹಾರಾಷ್ಟ್ರ ವಿಧಾನಸಭೆ 2018 ರ ನವೆಂಬರ್ 30 ರಂದು ಮರಾಠ ಸಮುದಾಯಕ್ಕೆ ಶೇ.16 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿತ್ತು. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಮುಂಬೈ ಕೋರ್ಟ್ ಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.  
ಫೆ.6 ರಿಂದ ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾ.ರಂಜಿತ್ ಮೋರೆ, ನ್ಯಾ.ಭರತಿ ದಂಗ್ರೆ ನೇತೃತ್ವದ ವಿಭಾಗೀಯ ಪೀಠ ಜೂ.27 ರಂದು ಮಹಾರಾಷ್ಟ್ರ ಸರ್ಕಾರದ ಮೀಸಲಾತಿಯನ್ನು ಎತ್ತಿ ಹಿಡಿದಿದ್ದು, ಮೀಸಲಾತಿ ಪ್ರಮಾಣವನ್ನು ಬದಲಾವಣೆ ಮಾಡಬಹುದೆಂದು ಹೇಳಿದೆ. 

Related Stories

No stories found.

Advertisement

X
Kannada Prabha
www.kannadaprabha.com