ಸುಪ್ರೀಂ ನಲ್ಲಿ ಹೊಸ ಕಾರ್ಯಸೂಚಿ: 5 ನ್ಯಾಯಾಧೀಶರಿಂದ ಪಿಐಎಲ್ ವಿಚಾರಣೆ

ಜುಲೈ.1 ರಿಂದ ಸುಪ್ರೀಂ ಕೋರ್ಟ್ 31 ನ್ಯಾಯಾಧೀಶರಿರುವ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದು, ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಹೊಸ ಕಾರ್ಯಸೂಚಿಗೆ ಅಧಿಸೂಚನೆ
ಸುಪ್ರೀಂ ನಲ್ಲಿ ಹೊಸ ಕಾರ್ಯಸೂಚಿ: 5 ನ್ಯಾಯಾಧೀಶರಿಂದ ಪಿಐಎಲ್ ವಿಚಾರಣೆ
ಸುಪ್ರೀಂ ನಲ್ಲಿ ಹೊಸ ಕಾರ್ಯಸೂಚಿ: 5 ನ್ಯಾಯಾಧೀಶರಿಂದ ಪಿಐಎಲ್ ವಿಚಾರಣೆ
Updated on
ನವದೆಹಲಿ: ಜುಲೈ.1 ರಿಂದ ಸುಪ್ರೀಂ ಕೋರ್ಟ್ 31 ನ್ಯಾಯಾಧೀಶರಿರುವ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದು, ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಹೊಸ ಕಾರ್ಯಸೂಚಿಗೆ ಅಧಿಸೂಚನೆ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯ ಮೂರ್ತಿಗಳು ಸೂಚಿಸಿರುವ ಹೊಸ ವಿಧಾನದ ಪ್ರಕಾರ ಸುಪ್ರೀಂ ಕೋರ್ಟ್ ನ ಟಾಪ್ 5 ನ್ಯಾಯಾಧೀಶರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.
ಸುಪ್ರೀಂ ಕೋರ್ಟ್‍ಗೆ ಬೇಸಿಗೆ ರಜೆ ಪ್ರಾರಂಭವಾಗುವುದಕ್ಕೂ ಮುನ್ನ, ಮೇ.24 ರಂದು ಹೊಸದಾಗಿ 4 ನ್ಯಾಯಾಧೀಶರು ಬಡ್ತಿ ಪಡೆದಿದ್ದರು. ಈ ಮೂಲಕ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆ 31 ಕ್ಕೆ ಏರಿಕೆಯಾಗಿತ್ತು. ಇದು ಸುಪ್ರೀಂ ಕೋರ್ಟ್ ನ ಗರಿಷ್ಠ ನ್ಯಾಯಾಧೀಶರ ಸಂಖ್ಯೆಯಾಗಿದೆ. 
ಈ ಹಿಂದೆ ಹೊಸದಾಗಿ ಬರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಿಜೆಐ ಹಾಗೂ ಸಿಜೆಐ ನಂತರ 2ನೇ  ಸ್ಥಾನದಲ್ಲಿರುವ ನ್ಯಾಯಾಧೀಶರು ಮಾತ್ರ ಆಲಿಸುತ್ತಿದ್ದರು. 
ಹೊಸ ಕಾರ್ಯಸೂಚಿಯ ಪ್ರಕಾರವಾಗಿ ಸಿಜೆಐ ಪಿಐಎಲ್ ವಿಷಯಗಳತ್ತ ಗಮನ ಹರಿಸಲಿದ್ದು, ಟಾಪ್ 4 ನ್ಯಾಯಾಧೀಶರಾದ ಎಸ್ಎ ಬಾಬ್ಡೆ, ಎನ್ ವಿ ರಮಣ, ಅರುಣ್ ಮಿಶ್ರಾ ಹಾಗೂ ಆರ್ ಎಫ್ ನಾರಿಮನ್ ಗೆ ಪಿಐಎಲ್ ಪ್ರಕರಣಗಳನ್ನು ಹಂಚಿಕೆ ಮಾಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com