ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿ ಸ್ವಿಸ್ ಬ್ಯಾಂಕ್ ಖಾತೆ ಮುಟ್ಚುಗೋಲು

ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ನೀರವ್‌ ಮೋದಿಗೆ ಸೇರಿರುವ ನಾಲ್ಕು ಸ್ವಿಸ್‌ ಬ್ಯಾಂಕ್‌ ...
ನೀರವ್ ಮೋದಿ
ನೀರವ್ ಮೋದಿ
ನವದೆಹಲಿ: ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ನೀರವ್‌ ಮೋದಿಗೆ ಸೇರಿರುವ ನಾಲ್ಕು ಸ್ವಿಸ್‌ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ನೀರವ್‌ಗೆ ಸೇರಿದ 2 ಮತ್ತು ಸಹೋದರಿ ಪೂರ್ವಿಗೆ ಸೇರಿದ 2 ಖಾತೆಗಳನ್ನು ಸ್ವಿಸ್ ಸರ್ಕಾರ ವಶಕ್ಕೆ ಪಡೆದಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಲೇವಾದೇವಿ ಕಾಯ್ದೆಯಡಿ ನೀರವ್ ಮೋದಿ ವಿರುದ್ಧ ದೂರು ದಾಖಲಾಗಿದೆ, ಸದ್ಯ ಲಂಡನ್ ನಲ್ಲಿರುವ ನೀರವ್ ಮೋದಿ ಜಾಮೀನನ್ನು ಇಂಗ್ಲೆಂಡ್ ನ್ಯಾಯಾಲಯ 4 ಬಾರಿ ವಜಾಗೊಳಿಸಿದೆ.
ಭಾರತೀಯ ಬ್ಯಾಂಕ್ ಗಳಿಂದ  ಹಣವನ್ನು ಅಕ್ರಮವಾಗಿ  ವರ್ಗಾಯಿಸಿಕೊಂಡು ಈ ಬ್ಯಾಂಕ್ ಗಳಲ್ಲಿ  ಠೇವಣಿ ಇರಿಸಲಾಗಿದೆ  ಎಂಬ ದೂರಿನ ಮೇಲೆ  ಕ್ರಮ ಕೈಗೊಳ್ಳಲು  ಭಾರತ  ಮನವಿ ಮಾಡಿತ್ತು
ಪಲಾಯನ ಗೈದಿರುವ ವಜ್ರಾಭರಣ ಉದ್ಯಮಿ ನೀರವ್ ಮೋದಿ ಸರ್ಕಾರಿ ಸ್ವಾಮ್ಯದ  ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ  ಸುಮಾರು 13 ಸಾವಿರದ 500ಕೋಟಿ ರೂಪಾಯಿ ವಂಚಿಸಿದ್ದ ಆರೋಪ ಎದುರಿಸುತ್ತಿದ್ದಾನೆ.

ಪ್ರಸ್ತುತ ನೀರವ್ ಮೋದಿ ಬ್ರಿಟನ್ ಪೊಲೀಸರ ಬಂಧನದಲ್ಲಿದ್ದು,  ಕಳೆದ ಮಾರ್ಚ್ ನಿಂದ  ಸಲ್ಲಿಸಿದ್ದ  ಜಾಮೀನು ಆರ್ಜಿಗಳು  ಹಲವು ಬಾರಿ ತಿರಸ್ಕರಿಸಿದ ಕಾರಣ  ಅಲ್ಲಿನ ಕುಖ್ಯಾತ ಜೈಲುಗಳಲ್ಲಿ ಒಂದಾಗಿರುವ ವಂಡ್ಸ್ ವರ್ತ್  ಬಂಧಿಖಾನೆಯಲ್ಲಿ ಬಂಧಿಸಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com