ಟ್ರಂಪ್ - ಮೋದಿ ನಡುವಣ ಮಾತುಕತೆಯಲ್ಲಿ ಎಸ್-400 ಒಪ್ಪಂದ ಕುರಿತು ಚರ್ಚಿಸಿಲ್ಲ: ಎಂಇಎ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ರಷ್ಯಾದಿಂದ ಖರೀದಿಸಲು ಉದ್ದೇಶಿಸಲಾಗಿರುವ ಎಸ್-400 ರಕ್ಷಣಾ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸ್ಪಷ್ಪಪಡಿಸಿದ್ದಾರೆ.
ನರೇಂದ್ರ ಮೋದಿ- ಟ್ರಂಪ್
ನರೇಂದ್ರ ಮೋದಿ- ಟ್ರಂಪ್
Updated on
ನವದೆಹಲಿ: ಜಪಾನ್ ನ ಒಸಾಕದಲ್ಲಿ ನಡೆಯುತ್ತಿರುವ ಜಿ-20 ದೇಶಗಳ ಶೃಂಗಸಭೆ ಬಿಡುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ರಷ್ಯಾದಿಂದ ಖರೀದಿಸಲು ಉದ್ದೇಶಿಸಲಾಗಿರುವ ಎಸ್-400 ರಕ್ಷಣಾ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸ್ಪಷ್ಪಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಎಸ್ - ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸುವ 5 ಬಿಲಿಯನ್ ಡಾಲರ್ ಗುತ್ತಿಗೆ ಒಪ್ಪಂದವನ್ನು ಭಾರತ ಹಾಗೂ ರಷ್ಯಾ ದೇಶಗಳು ಅಂತಿಮಗೊಳಿಸಿದ್ದವು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಭಾರತ ಭೇಟಿಯ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಮೆರಿಕಾ  ಅಧ್ಯಕ್ಷರೊಂದಿಗಿನ ಮಾತುಕತೆ ವೇಳೆ ಪ್ರಧಾನಿ ಮೋದಿ, ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ವಿಷಯ ಚರ್ಚಿಸಿಲ್ಲ. ಈ ವಿಷಯವೇ ಚರ್ಚೆಗೆ ಬಂದಿಲ್ಲ ಎಂದು ವಿಜಯ್ ಗೋಖಲೆ ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕಾ ನಡುವಣ ಕಾರ್ಯತಂತ್ರ ಸಹಭಾಗಿತ್ವದ ಮೇಲೆ ಯಾವುದೇ ವಿಷಯಗಳು ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಭಾರತ ಹಾಗೂ ಅಮೆರಿಕಾ ನಡುವಣ ಆಳವಾದ ಬಾಂಧವ್ಯವಿದ್ದು, ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲಾಗುವುದು, ಆದರೆ, ಈ ವಿಷಯಗಳು ನಮ್ಮ ಬಾಂಧವ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ರಷ್ಯಾದಿಂದ ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸುವ ಭಾರತದ ಯೋಜನೆಗೆ ಅಮೆರಿಕಾ ವಿರೋಧ ವ್ಯಕ್ತಪಡಿಸಿದೆ. ರಷ್ಯಾದಿಂದ ಎಸ್ -400 ರಕ್ಷಣಾ ವ್ಯವಸ್ಥೆಯ ಖರೀದಿಗಾಗಿ ಭಾರತ 2018ರ ಅಕ್ಟೋಬರ್ 5 ರಂದು ಒಪ್ಪಂದಕ್ಕೆ ಸಹಿ ಮಾಡಿತ್ತು. 2020ರ ಅಕ್ಟೋಬರ್ ನಲ್ಲಿ ಈ ವ್ಯವಸ್ಥೆ ಭಾರತಕ್ಕೆ ಲಭ್ಯವಾಗಲಿದ್ದು, 2022ರ ವೇಳಗೆ ಆಮದು ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ಕಳೆದ ಜನವರಿಯಲ್ಲಿ ತಿಳಿಸಿತ್ತು. 
ರಷ್ಯಾದಿಂದ ಎಸ್ -400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದರೆ ಭಾರತ- ಅಮೆರಿಕಾ ನಡುವಣ ರಕ್ಷಣಾ ಒಪ್ಪಂದಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಮೆರಿಕಾ ಈ ಮೊದಲು ಎಚ್ಚರಿಕೆ ನೀಡಿತ್ತು. 
ಎಸ್ -ಕ್ಷಿಪಣಿ ಖರೀದಿ ಒಪ್ಪಂದಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ಅರಿವಿದೆ. ದೇಶಕ್ಕಿರುವ ಅಪಾಯದ ಗ್ರಹಿಕೆ ಮತ್ತು ಬೆದರಿಕೆಯನ್ನು ಎದುರಿಸುವ ಅಧಿಕಾರ ಭಾರತಕ್ಕಿದ್ದು, ಯಾವುದೇ ಸನ್ನಿವೇಶವನ್ನು ಎದುರಿಸಲು ಸಶಸ್ತ್ರ ಪಡೆಗಳನ್ನು ಸನ್ನದ್ಧಗೊಳಿಸುವ  ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ ಈ ಮೊದಲು ಹೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com