
ನವದೆಹಲಿ: ಬಿಜೆಪಿಯಲ್ಲಿ ಪ್ರಧಾನಿ ಮೋದಿಗೆ ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಯತ್ನಿಸುತ್ತಿದ್ದಾರೆ ಎಂಬಂತಹ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತಿತ್ತು.
ಮಧ್ಯಪ್ರದೇಶ, ರಾಜಸ್ತಾನ, ಹಾಗೂ ಛತ್ತೀಸ್ ಗಡ ಚುನಾವಣೆ ಫಲಿತಾಂಶದ ಬಳಿಕ ಗಡ್ಕರಿ ನೀಡಿದ ಹೇಳಿಕೆಗಳು ಕೂಡಾ ಇದಕ್ಕೆ ಇಂಬು ನೀಡುವಂತಿದೆ ಎನ್ನಲಾಗುತಿತ್ತು. ಆದರೆ, ತಾವು ಪ್ರಧಾನಿ ರೇಸ್ ನಲ್ಲಿ ಇಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ ರೇಸ್‍ನಲ್ಲಿ ಇಲ್ಲ, ದೇಶದ ಪ್ರಧಾನಿಯಾಗಿ ಮತ್ತೆ ನರೇಂದ್ರ ಮೋದಿಯವರೇ ಆಯ್ಕೆಯಾಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.“ಪ್ರಧಾನಿಯಾಗುವ ಕನಸು ನನಗಿಲ್ಲ. ದೇಶವು ಮೋದಿಯವರ ನಾಯಕತ್ವದಲ್ಲಿ ಸಮರ್ಥವಾಗಿದ್ದು, ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ” ಎಂದು ಇಂಡಿಯನ್ ಟುಡೇ ಆಯೋಜಿಸಿದ್ದ ಸಭೆಯಲ್ಲಿ ತಿಳಿಸಿದ್ದಾರೆ.
Advertisement