ಮಸೂದ್ ಅಝರ್ ಮೌಲಾನಾ ಅಲ್ಲ, ಪಿಶಾಚಿ - ಓವೈಸಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದು, ಜೈಷ್ - ಇ- ಮೊಹಮ್ಮದ್ ಹಾಗೂ ಲಷ್ಕರ್ - ಇ- ತೊಯ್ಬಾ ಉಗ್ರ ಸಂಘಟನೆಗಳು ರಕ್ಷಸ ಸಂಘಟನೆಗಳು ಎಂದು ಬಣ್ಣಿಸಿದ್ದಾರೆ.
ಅಕ್ಬರುದ್ದೀನ್ ಓವೈಸಿ
ಅಕ್ಬರುದ್ದೀನ್ ಓವೈಸಿ

ಹೈದ್ರಾಬಾದ್: ಭಾರತದ ವಿರುದ್ಧ ಅಣ್ವಸ್ತ್ರ ಹಾಗೂ ಮುಸ್ಲಿಂ ಕಾರ್ಡ್ ಪ್ರಯೋಗಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದು, ಜೈಷ್ - ಇ- ಮೊಹಮ್ಮದ್ ಹಾಗೂ ಲಷ್ಕರ್ - ಇ- ತೊಯ್ಬಾ ಉಗ್ರ ಸಂಘಟನೆಗಳು  ರಕ್ಷಸ ಸಂಘಟನೆಗಳು ಎಂದು ಬಣ್ಣಿಸಿದ್ದಾರೆ.

ಇಮ್ರಾನ್ ಖಾನ್ ಪಾಕಿಸ್ತಾನ ಸಂಸತ್ತಿನಲ್ಲಿ ಮಾಡಿದ ಭಾಷಣದ ವಿರುದ್ಧ ತೀವ್ರ ವಾಕ್ ಪ್ರಹಾರ ನಡೆಸಿದ್ದಾರೆ.  ಅಟೋಮ್ ಬಾಂಬ್ ಮತ್ತಿತರ ಸಲಕರಣೆಗಳನ್ನು ಹೊಂದಿರುವುದಾಗಿ ಅವರು ಹೇಳುತ್ತಾರೆ, ಆದರೆ, ನಾವು ಏಕೆ ಹೊಂದಿಲ್ಲವೇ ? ನಾವು ಕೂಡಾ ಇಂತಹ ಸಾಧನಗಳನ್ನು ಹೊಂದಿರುವುದಾಗಿ ಹೇಳಿದರು.

ಭಾರತವನ್ನು ಗುರಿಯಾಗಿಟ್ಟುಕೊಂಡು ಮುಸ್ಲಿಂ ಕಾರ್ಡ್ ಪ್ರಯೋಗಿಸುತ್ತಿರುವ  ಇಮ್ರಾನ್ ಖಾನ್ , ಭಾರತದಲ್ಲಿನ ಮುಸ್ಲಿಂರು ಉತ್ತಮ ಜೀವನ ಸಾಗಿಸುತ್ತಿದ್ದೇವೆ.ಮೊದಲು ನಿಮ್ಮ ದೇಶದಲ್ಲಿನ ಲಷ್ಕರ್ -ಇ- ತೊಯ್ಬಾ, ಜೈಷ್- ಇ- ಸೈತನಾ ಉಗ್ರ ಸಂಘಟನೆಗಳನ್ನು ನಿರ್ಮೂಲನೆಗೊಳಿಸಿ ಎಂದರು.

ಮಸೂದ್ ಅಝಾರ್ ಮೌಲಾನಾ ಅಲ್ಲ, ಪಿಶಾಚಿ ಮತ್ತು ನರ ಹಂತಕ ಎಂದು ಹೇಳಿದ ಓವೈಸಿ, ಭಾರತ ವಿರುದ್ಧದ ಶತ್ರುಗಳು ನಮ್ಮ ಮುಸ್ಲಿಂರ ಸಮುದಾಯದ ಶತ್ರುಗಳು ಕೂಡಾ ಆಗಿದ್ದಾರೆ
ಎಂದು ತಿಳಿಸಿದರು.
ಇಮ್ರಾನ್ ಖಾನ್ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಹೆಸರು ಬಳಸಿದ್ದನ್ನು ಟೀಕಿಸಿದ್ದನ್ನು ಟೀಕಿಸಿದ ಓವೈಸಿ,  ಟಿಪ್ಪು ಸುಲ್ತಾನ್ ಎಂದಿಗೂ ಹಿಂದೂಗಳ ವಿರೋಧಿಯಾಗಿರಲಿಲ್ಲ, ಆದರೆ, ದುರಾಡಳಿತದ ವಿರೋಧಿಯಾಗಿದ್ದರು ಎಂದು ತಿಳಿಸಿದರು. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸ್ವದೇಶಕ್ಕೆ ವಾಪಾಸ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com