ವಿಂಗ್ ಕಮಾಂಡರ್ ಅಭಿನಂಧನ್‌ಗೆ ಎಂಆರ್‌ಐ ಸ್ಕ್ಯಾನ್: ಪಕ್ಕೆಲುಬು, ಬೆನ್ನೆಲುಬಿನಲ್ಲಿ ಗಾಯ ಪತ್ತೆ

ಬಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರರಿಗೆ ಎರಡನೇ ದಿನವೂ ಸಹ ವೈದ್ಯಕೀಯ ಪರೀಕ್ಷೆಗಳು ಮುಂದುವರಿದಿವೆ.
ವಿಂಗ್ ಕಮಾಂಡರ್ ಅಭಿನಂದನ್
ವಿಂಗ್ ಕಮಾಂಡರ್ ಅಭಿನಂದನ್
ನವದೆಹಲಿ: ಬಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರರಿಗೆ ಎರಡನೇ ದಿನವೂ ಸಹ ವೈದ್ಯಕೀಯ ಪರೀಕ್ಷೆಗಳು ಮುಂದುವರಿದಿವೆ. ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಐಎ ಎಫ್ ಅಧಿಕಾರಿಗಳ ಸಮ್ಮುಖದಲ್ಲೇ ಪರೀಕ್ಷೆ ನಡೆದಿದೆ. ಅಭಿನಂದನ್ ಅವರಿಗೆ ಎಂಆರ್ ಐ ಸ್ಕ್ಯಾನ್ ಮಾಡಲಾಗಿದೆ ಎಂದು ವರದಿಗಳು ಹೇಳಿದೆ.
ಶುಕ್ರವಾರ ಪಾಕಿಸ್ತಾನದಿಂದ ಹಿಂತಿರುಗಿದ ವಿಂಗ್ ಕಮಾಂಡರ್ ಅವರ ಸೇನಾ ತನಿಖೆ ಇನ್ನೂ ಮುಂದುವರಿದಿದ್ದು ಇದುವರೆಗೆ ಯಾವುದೇ ಸಂಶಯಾತ್ಮಕ ವಿಚಾರಗಳಿಲ್ಲ ಎಂದು ಹೇಳಲಾಗಿದೆ.
ಬುಧವಾರ ಪಾಕಿಸ್ತಾನದ ಎಫ್ -16 ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಅವರಿದ್ದ ಮಿಗ್ ವಿಮಾನವು ಪಾಕ್ ಗಡಿಯೊಳಗೆ ಪತನಗೊಂಡಿದ್ದು ಈ ವೇಳೆ ಪೈಲಟ್ ಅಭಿನಂಡನ್ ಪಾಕ್ ನೆಲದಲ್ಲಿ ಇಳಿದಿದ್ದರು.ಆಗ ಅಲ್ಲಿನ ಸ್ಥಳೀಯರು ಅವರ ಮೇಲೆ ಹಲೆ ನಡೆಸಿದ್ದಲ್ಲದೆ ಪಾಕ್ ಸೈನ್ಯ ಅವರನ್ನು ವಶಕ್ಕೆ ಪಡೆಇದ್ತ್ತು. ಸತತ ಎರಡೂ ವರೆ ದಿನಗಳ ಕಾಲ ಪಾಕ್ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ರಾತ್ರಿ ಭಾರತಕ್ಕೆ ಹಿಂದಿರುಗಿದ್ದಾರೆ.
ಎಂಆರ್ ಐ ಸ್ಕ್ಯಾನ್ ವರದಿಯಲ್ಲಿ ಅಭಿನಂದನ್ ಅವರ ಪಕ್ಕೆಲುಬು,  ಕೆಳ ಬೆನ್ನುಮೂಳೆಯ ಭಾಗದಲ್ಲಿ ಗಾಯವಾಗಿರುವುದು ಸಹ ಪತ್ತೆಯಾಗಿದೆ. ಪಾಕಿಸ್ತಾನ ಸ್ಥಳೀಯರು ನಡೆಸಿದ್ದ ಹಲ್ಲೆಯಿಂದ ಅವರು ಗಾಯಗೊಂಡಿದ್ದಾರೆ.
ಮುಂದಿನ ಹತ್ತು ದಿನಗಳ ಕಾಲ ದೆಹಲಿ ಕಂಟೋನ್ಮೆಂಟ್ ಪ್ರದೇಶದ ರಿಸರ್ಚ್ ಆಂಡ್ ರೆಫರಲ್ ಹಾಸ್ಪಿಟಲ್ ನಲ್ಲಿ ಅಭಿನಂದನ್ ಅವರಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಗಳು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com