ಉಗ್ರರ ರುಂಡ ಚೆಂಡಾಡಲು ಭಾರತೀಯ ಯೋಧರಿಗೆ ಎಕೆ-203 ರೈಫಲ್; ಉಗ್ರರಲ್ಲಿ ನಡುಕ ಶುರು!

ಭಯೋತ್ಪಾದಕರು ಹಾಗೂ ನಕ್ಸಲರ ವಿರುದ್ಧ ಹೋರಾಡಲು ನಮ್ಮ ಭಾರತೀಯ ಯೋಧರಿಗೆ ಹೊಸ ಶಕ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಕಟಿ ಬದ್ಧರಾಗಿದ್ದು ಎಕೆ-47 ನಂತರ ಅತ್ಯುತ್ಕ್ರಷ್ಟ ಎಕೆ-203...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಯೋತ್ಪಾದಕರು ಹಾಗೂ ನಕ್ಸಲರ ವಿರುದ್ಧ ಹೋರಾಡಲು ನಮ್ಮ ಭಾರತೀಯ ಯೋಧರಿಗೆ ಹೊಸ ಶಕ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಕಟಿ ಬದ್ಧರಾಗಿದ್ದು ಎಕೆ-47 ನಂತರ ಅತ್ಯುತ್ಕ್ರಷ್ಟ ಎಕೆ-203 ರೈಫಲ್ ಉತ್ಫಾದನೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಥಾಪಿಸಲಾದ ಕಲಾಶ್ನಿಕೋವ್ ರೈಫಲ್ಸ್ ಘಟಕದಲ್ಲಿ ಅತ್ಯಾಧುನಿಕ ಎಕೆ-203 ರೈಫಲ್ ಗಳನ್ನು ಉತ್ಪಾದಿಸಲಾಗುತ್ತಿದೆ. ಇದು ವಿಶ್ವದ ಅತ್ಯಾಧುನಿಕ ಬಂದೂಕುಗಳಲ್ಲಿ ಒಂಗಾಗಿದೆ ಎಂದು ಮೋದಿ ಬಣ್ಣಿಸಿದರು. 
ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಕೋರ್ವಾ ಶಸ್ತ್ರಾಸತ್ರ್ ಕಾರ್ಖಾನೆಯಲ್ಲಿ ಈ ಆಯುಧವನ್ನು ತಯಾರಿಸಲಾಗುತ್ತಿದೆ. ಇನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆತ್ಮೀಯ ಮಿತ್ರ ಎಂದು ಕರೆದಿರುವ ಮೋದಿ, ಪುಟಿನ್ ಅವರ ಸಹಕಾರದಿಂದ ಅತೀ ಶೀಘ್ರವಾಗಿ ಈ ಜಂಟಿ ಸಹಭಾಗಿತ್ವದ ಉದ್ಯಮ ಸಾಧ್ಯವಾಯಿತು ಎಂದು ಹೇಳಿದರು. 
7.62X39 ಎಂಎಂ ಕ್ಯಾಲಿಬರ್ ಎಕೆ-204 ಗನ್ ಗಳು ಎಕೆ-47 ಸರಣಿಯ ಅತ್ಯಾಧುನಿಕ ತಲೆಮಾರಿನ ಅಸ್ತ್ರಗಳಾಗಿವೆ. 7.50 ಲಕ್ಷ ಎಕೆ-203 ರೈಫಲ್ ಗಳ ಉತ್ಪಾದನೆಗೆ ರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಬಂದೂಕುಗಳನ್ನು ಭೂಸೇನೆ ಯೋಧರಿಗೆ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com