ನೀವು ನಿರ್ನಾಮ ಮಾಡಿದ್ದು ಮರಗಳನ್ನೋ ಉಗ್ರರನ್ನೋ?: ಐಎಎಫ್ ವೈಮಾನಿಕ ದಾಳಿ ಪ್ರಶ್ನಿಸಿದ ಸಿಧು!

ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿರುವುದನ್ನು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
ನೀವು ನಿರ್ನಾಮ ಮಾಡಿದ್ದು ಮರಗಳನ್ನೋ ಉಗ್ರರನ್ನೋ?: ಐಎಎಫ್ ವೈಮಾನಿಕ ದಾಳಿ ಪ್ರಶ್ನಿಸಿದ ಸಿಧು!
ನೀವು ನಿರ್ನಾಮ ಮಾಡಿದ್ದು ಮರಗಳನ್ನೋ ಉಗ್ರರನ್ನೋ?: ಐಎಎಫ್ ವೈಮಾನಿಕ ದಾಳಿ ಪ್ರಶ್ನಿಸಿದ ಸಿಧು!
Updated on
ನವದೆಹಲಿ: ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿರುವುದನ್ನು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ಪ್ರಶ್ನಿಸಿದ್ದಾರೆ. 
ಬಿಜೆಪಿ ನಾಯಕರ ಪ್ರತಿಕ್ರಿಯೆಗಳನ್ನು ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ವೈಮಾನಿಕ ದಾಳಿ ಕೇವಲ ಎಲೆಕ್ಷನ್ ಗಿಮಿಕ್ಕಾ? ಎಂದು ಪ್ರಶ್ನಿಸಿದ್ದಾರೆ. 
ವೈಮಾನಿಕ ದಾಳಿಯಲ್ಲಿ 300 ಭಯೋತ್ಪಾದಕರು ಹತರಾಗಿದ್ದಾರೆ. ಹೌದೋ ಅಲ್ಲವೋ? ಅದರ ಉದ್ದೇಶವೇನು? ನಿರ್ನಾಮ ಮಾಡಿದ್ದು ಭಯೋತ್ಪಾದಕರನ್ನೋ, ಮರಗಳನ್ನೋ ಎಂದು ಸಿಧು ಪ್ರಶ್ನಿಸಿದ್ದಾರೆ. 
ವಿದೇಶಿ ಶತ್ರುವಿನ ವಿರುದ್ಧದ ಹೋರಾಟದ ವೇಶದಲ್ಲಿ ಮೋಸ ನಮ್ಮ ನೆಲವನ್ನು ಆವರಿಸುತ್ತಿದೆ. ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಿ ಎಂದು ಸಿಧು ಹೇಳಿದ್ದು, ಯುದ್ಧದಲ್ಲಿ ಮೊದಲು ಹಾನಿಗೀಡಾಗುವುದು ಯಾವುದೆಂದರೆ ಅದು ಸತ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com