ಭಾರತದ ಜಲಾಂತರ್ಗಾಮಿ ನೌಕೆಯಿಂದ ಗಡಿ ದಾಟಿ ಪ್ರವೇಶಿಸಲು ಯತ್ನ: ಪಾಕಿಸ್ತಾನ

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕ್ ನೆಲದಲ್ಲಿದ್ದ ಉಗ್ರರ ಕ್ಯಾಂಪ್ ಗಳ ಮೇಲೆ ನಡೆದಿದ್ದ ವೈಮಾನಿಕ ದಾಳಿಯ ನಂತರ ಭಾರತ-ಪಾಕ್ ನಡುವೆ ಉದ್ಭವಿಸಿದ್ದ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆದಿದ್ದು, ಭಾರತದ
ಭಾರತದ ಜಲಾಂತರ್ಗಾಮಿ ನೌಕೆಯಿಂದ ಗಡಿ ದಾಟಿ ಪ್ರವೇಶಿಸಲು ಯತ್ನ: ಪಾಕಿಸ್ತಾನ
ಭಾರತದ ಜಲಾಂತರ್ಗಾಮಿ ನೌಕೆಯಿಂದ ಗಡಿ ದಾಟಿ ಪ್ರವೇಶಿಸಲು ಯತ್ನ: ಪಾಕಿಸ್ತಾನ
ಕರಾಚಿ: ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕ್ ನೆಲದಲ್ಲಿದ್ದ ಉಗ್ರರ ಕ್ಯಾಂಪ್ ಗಳ ಮೇಲೆ ನಡೆದಿದ್ದ ವೈಮಾನಿಕ ದಾಳಿಯ ನಂತರ ಭಾರತ-ಪಾಕ್ ನಡುವೆ ಉದ್ಭವಿಸಿದ್ದ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆದಿದ್ದು, ಭಾರತದ ಜಲಾಂತರ್ಗಾಮಿ ನೌಕೆಗಳು ಗಡಿ ದಾಟಲು ಯತ್ನಿಸಿದೆ ಎಂದು ಪಾಕ್ ಆರೋಪಿಸಿದೆ. 
ಜಲ ಗಡಿ ದಾಟಿ ಪಾಕ್ ನತ್ತ ನುಗ್ಗುತ್ತಿದ್ದ ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿದ್ದು, ಈ ಸಂಬಂಧ ಪಾಕಿಸ್ತಾನ ನೌಕಾಪಡೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. 
ಭಾರತೀಯ ಜಲಾಂತರ್ಗಾಮಿ ನೌಕೆ ಪಾಕಿಸ್ತಾನದ ಜಲಗಡಿಯನ್ನು ದಾಟದೇ ಇರುವಂತೆ ತಡೆಗಟ್ಟುವಲ್ಲಿ ಪಾಕಿಸ್ತಾನದ ನೌಕಾಪಡೆ ಯಶಸ್ವಿಯಾಗಿದೆ ಎಂದು ಅಲ್ಲಿನ ವಕ್ತಾರರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಶಾಂತಿಯ ಉದ್ದೇಶದಿಂದ ಭಾರತದ ಜಲಾಂತರ್ಗಾಮಿಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಿಲ್ಲ ಎಂದೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com