ಬಾಲಾಕೋಟ್ ಐಎಎಫ್ ದಾಳಿ: ಜನರಿಗೆ ವಿವರ ತಿಳಿದುಕೊಳ್ಳುವ ಹಕ್ಕಿದೆ, ಪ್ರತಿಪಕ್ಷಗಳ ಹೇಳಿಕೆಗೆ ಶಿವಸೇನೆ ಧ್ವನಿ

ಭಾರತೀಯ ವಾಯುಪಡೆ ಪಾಕಿಸ್ತಾನ ನೆಲದಲ್ಲಿ ವೈಮಾನಿಕ ದಾಳಿ ನಡೆಸಿರುವುದಕ್ಕೆ ಸಾಕ್ಷ್ಯ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಹೇಳಿಕೆಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆಯೂ ಸಹ ಧ್ವನಿಗೂಡಿಸಿದೆ.
ಐಎಎಫ್ ದಾಳಿ: ಪ್ರತಿಪಕ್ಷಗಳ ಹೇಳಿಕೆಗೆ ಧ್ವನಿಗೂಡಿಸಿದ ಬಿಜೆಪಿ ಮಿತ್ರಪಕ್ಷ ಶಿವಸೇನೆ
ಐಎಎಫ್ ದಾಳಿ: ಪ್ರತಿಪಕ್ಷಗಳ ಹೇಳಿಕೆಗೆ ಧ್ವನಿಗೂಡಿಸಿದ ಬಿಜೆಪಿ ಮಿತ್ರಪಕ್ಷ ಶಿವಸೇನೆ
ಮುಂಬೈ: ಭಾರತೀಯ ವಾಯುಪಡೆ ಪಾಕಿಸ್ತಾನ ನೆಲದಲ್ಲಿ ವೈಮಾನಿಕ ದಾಳಿ ನಡೆಸಿರುವುದಕ್ಕೆ ಸಾಕ್ಷ್ಯ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಹೇಳಿಕೆಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆಯೂ ಸಹ ಧ್ವನಿಗೂಡಿಸಿದೆ. 
ದೇಶದ ಜನತೆಗೆ ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ (ಜೆಇಎಂ) ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಿರ್ನಾಮವಾದ ಉಗ್ರರ ಬಗ್ಗೆ ಮಾಹಿತಿ ಪಡೆಯುವ ಹಕ್ಕು ಈ ದೇಶದ ಜನತೆಗೆ ಇದೆ, ಈ ಮಾಹಿತಿಗಳನ್ನು ಬಹಿರಂಗಗೊಳಿಸುವುದರಿಂದ ಸೇನೆಯ ನೈತಿಕತೆಯನ್ನು ಕುಗ್ಗಿಸುವಂತೇನು ಆಗುವುದಿಲ್ಲ ಎಂದು ಶಿವಸೇನೆ ಹೇಳಿದೆ. 
ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಈ ಕುರಿತು ಸಂಪಾದಕೀಯ ಪ್ರಕಟಿಸಿರುವ ಶಿವಸೇನೆ, ವೈಮಾನಿಕ ದಾಳಿಯ ಬಗ್ಗೆ ಮುಂಬರುವ ಲೋಕಸಭಾ ಚುನಾವಣೆವರೆಗೂ ಚರ್ಚೆಯಲ್ಲಿಯೇ ಇರುತ್ತದೆ. ಫೆ.14 ಕ್ಕಿಂತ ಮುನ್ನ ಪ್ರತಿಪಕ್ಷಗಳು ಪ್ರಸ್ತಾಪಿಸಿದ್ದ ಮಹತ್ವದ ಅಂಶಗಳೆಲ್ಲವೂ ಈಗ ನಗಣ್ಯವಾಗಿದೆ ಎಂದು ಹೇಳಿದೆ. ಇದೇ ವೇಳೆ ಪುಲ್ವಾಮ ದಾಳಿಯ ಬಗ್ಗೆಯೂ ಸಂಪಾದಕೀಯದಲ್ಲಿ ಪ್ರಕಟಿಸಿರುವ ಶಿವಸೇನೆ, ಪುಲ್ವಾಮ ದಾಳಿ ನಡೆಸಿದ ಉಗ್ರನಿಗೆ 300 ಕೆ.ಜಿಯಷ್ಟು ಆರ್ ಡಿಎಕ್ಸ್ ಎಲ್ಲಿಂದ ಸಿಕ್ಕಿತು? ಎಂದು ಶಿವಸೇನೆ ಪ್ರಶ್ನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com