ಕೆನ್ನೆಗೆ ಹೊಡೆಸಿಕೊಂಡವರೆಲ್ಲ ಉಗ್ರನಾಗುವುದಾದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿಲವಾಲ್ ಇಷ್ಟರಲ್ಲಾಗಲೇ ಒಸಾಮ ಬಿನ್ ಲಾಡೆನ್ ಆಗಿರಬೇಕಿತ್ತು ಎಂದು ಆಮ್ ಆದ್ಮಿ ರೆಬೆಲ್ ಶಾಸಕ ಕಪಿಲ್ ಮಿಶ್ರಾ ಹೇಳಿದ್ದಾರೆ.
ನವದೆಹಲಿ: ಕೆನ್ನೆಗೆ ಹೊಡೆಸಿಕೊಂಡವರೆಲ್ಲ ಉಗ್ರನಾಗುವುದಾದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿಲವಾಲ್ ಇಷ್ಟರಲ್ಲಾಗಲೇ ಒಸಾಮ ಬಿನ್ ಲಾಡೆನ್ ಆಗಿರಬೇಕಿತ್ತು ಎಂದು ಆಮ್ ಆದ್ಮಿ ರೆಬೆಲ್ ಶಾಸಕ ಕಪಿಲ್ ಮಿಶ್ರಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ಮೂಲಕ 40ಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡ ಅದಿಲ್ ಅಹ್ಮದ್ ದರ್ ಎಂಬ ಉಗ್ರಗಾಮಿಯು ಪೊಲೀಸರಿಂದ ಹೊಡೆತ ತಿಂದ ಬಳಿಕ ಭಯೋತ್ಪಾದನೆಗಿಳಿದ ಎಂಬ ವಾದವನ್ನು ಅಲ್ಲಗಳೆದ ಕಪಿಲ್ ಮಿಶ್ರಾ ಅವರು ಈ ಮಾತನ್ನು ಹೇಳಿದ್ದಾರೆ.
ಪೊಲೀಸರ ಒಂದು ಹೊಡೆತ ಅದಿಲ್ ನನ್ನ ಭಯೋತ್ಪಾದಕನನ್ನಾಗಿ ಮಾಡುತ್ತದೆ ಎಂದಾದರೆ ಸಾರ್ವಜನಿಕವಾಗಿ ಮೂರ್ನಾಲ್ಕು ಬಾರಿ ಕೆನ್ನೆಗೆ ಹೊಡೆಸಿಕೊಂಡಿರುವ ಕೇಜ್ರಿವಾಲ್ ಅವರು ಒಸಾಮಾ ಬಿನ್ ಲಾಡೆನ್ ಆಗಿರುತ್ತಿದ್ದರು.
ಕಮ್ಯೂನಿಸ್ಟರು ಮತ್ತು ನಕ್ಸಲರು ಜೆಎನ್ ಯುಯಿಂದ ಮಾತ್ರವಲ್ಲ. ಐಐಟಿಯಿಂದಲೂ ಹೊರಬರುತ್ತಾರೆ ಎಂದು ಕಪಿಲ್ ಮಿಶ್ರಾ ಟೀಕಿಸಿದ್ದಾರೆ. ಇನ್ನು ರಾಜಕೀಯಕ್ಕೆ ಬರುವ ಮುನ್ನ ಕೇಜ್ರಿವಾಲ್ ಮೇಲೆ ಮೂರು ಬಾರಿ ಸಾರ್ವಜನಿಕವಾಗಿ ಹಲ್ಲೆಯಾಗಿತ್ತು.