ಕುಂಭಮೇಳ ನೈರ್ಮಲ್ಯ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ 21 ಲಕ್ಷ ದೇಣಿಗೆ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಶುಚಿತ್ವ ಕಾಪಾಡಿದ ನೈರ್ಮಲ್ಯ ಕಾರ್ಮಿಕರಿಗೆ ತಮ್ಮ ವಯಕ್ತಿಕ ಉಳಿತಾಯ ಖಾತೆಯಿಂದ ಪ್ರಧಾನಿ ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಶುಚಿತ್ವ ಕಾಪಾಡಿದ ನೈರ್ಮಲ್ಯ ಕಾರ್ಮಿಕರಿಗೆ ತಮ್ಮ ವಯಕ್ತಿಕ ಉಳಿತಾಯ ಖಾತೆಯಿಂದ ಪ್ರಧಾನಿ ನರೇಂದ್ರ ಮೋದಿ 21 ಲಕ್ಷ ರು ಹಣ ದೇಣಿಗೆ ನೀಡಿದ್ದಾರೆ. 
ಪ್ರದಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಶುಚಿತ್ವ ಕಾಪಾಡಿಕೊಂಡ ಕಾರ್ಮಿಕರಿಗೆ ಪಾದ ತೊಳೆದಿದ್ದರು, ಜೊತೆಗೆ ನೈರ್ಮಲ್ಯ ಕಾರ್ಮಿಕರ ಜೊತೆ ಸಂವಾದ ನಡೆಸಿದ್ದರು, ಅವರನ್ನು ನಿಜವಾದ ಕರ್ಮಯೋಗಿ ಎಂದು ಬಣ್ಣಿಸಿದ್ದರು. 
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಗಳ ಕಾರ್ಯಾಲಯ 21 ಲಕ್ಷ ರು ನೀಡಿದ್ದಾಗಿ ತಿಳಿಸಿದೆ, ಶುಚಿತ್ವ ಕಾಪಾಡುವ ಕಾರ್ಮಿಕರಿಗೆ ಈ ದೇಣಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ,
ಈ ಬಾರಿಯ ಕುಂಭಮೇಳಕ್ಕೆ ದಾಖಲೆಯ ಪ್ರಮಾಣದ ಜನ ಹರಿದು ಬಂದಿದ್ದರು. ಕುಂಭಮೇಳ 49 ದಿನಗಳ ಕಾಲ ನಡೆದಿದ್ದು, ಮಂಗಳವಾರ ಅಂತ್ಯಗೊಂಡಿದೆ. ಜ.15 ರಂದು ಆರಂಭವಾದ ಕುಂಭಮೇಳ ಮಾ.4 ರಂದು ಕೊನೆಗೊಂಡಿದೆ. 
ಈ ಕುಂಭಮೇಳ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 70 ದೇಶದ ರಾಯಭಾರಿಗಳು, 193 ದೇಶದ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com