ಬಾಬರ್ ಮಾಡಿದ್ದರ ಬಗ್ಗೆ ನಮಗೆ ಚಿಂತೆ ಇಲ್ಲ: ಅಯೋಧ್ಯ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್
ಮೊಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ ಏನು ಮಾಡಿದ್ದ, ಆ ನಂತರ ಏನಾಯಿತು ಎಂಬುದರ ಬಗ್ಗೆ ಎಲ್ಲಾ ನಮಗೆ ಕಾಳಜಿ ಇಲ್ಲ. ಈಗ ಏನಿದೆ ಅದರ ಬಗ್ಗೆ ಮಾತ್ರ ನಾವು ಚಿಂತೆ ಮಾಡಬಹುದು ಎಂದು ಅಯೋಧ್ಯೆ
ನವದೆಹಲಿ: ಮೊಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ ಏನು ಮಾಡಿದ್ದ, ಆ ನಂತರ ಏನಾಯಿತು ಎಂಬುದರ ಬಗ್ಗೆ ಎಲ್ಲಾ ನಮಗೆ ಕಾಳಜಿ ಇಲ್ಲ. ಈಗ ಏನಿದೆ ಅದರ ಬಗ್ಗೆ ಮಾತ್ರ ನಾವು ಚಿಂತೆ ಮಾಡಬಹುದು ಎಂದು ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಹಾಗೂ ಮಧ್ಯಸ್ಥಿಕೆಯಿಂದ ಬರಬಹುದಾದ ಫಲಿತಾಂಶದ ಬಗ್ಗೆ ಅರಿವು ಹೊಂದಿರುವುದಾಗಿ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಮಾ.06 ರ ವಿಚಾರಣೆ ವೇಳೆ ತಿಳಿಸಿದೆ.
ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಕೇವಲ ಭೂಮಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ ಅದು ನಂಬಿಕೆ ಹಾಗೂ ಭಾವನೆಗಳಿಗೆ ಸಂಬಂಧಪಟ್ಟಿದ್ದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.
"ಮೊಘಲ್ ದೊರೆ ಬಾಬರ್ ಏನು ಮಾಡಿದ್ದ ಆ ನಂತರದಲ್ಲಿ ಏನೆಲ್ಲಾ ಆಯಿತು ಎಂಬುದು ನಮ್ಮ ಕಾಳಜಿಯಲ್ಲಿಲ್ಲ. ಇರುವುದರ ಆಧಾರದಲ್ಲಿ ನಾವು ನಡೆಯಬಹುದು, ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಬಹುದೇ ಎಂಬುದನ್ನು ಕೋರ್ಟ್ ಪರಿಗಣಿಸುತ್ತಿದೆ ಎಂದು ಪಂಚ ಸದಸ್ಯ ಪೀಠ ಹೇಳಿದೆ.
ಮಧ್ಯಸ್ಥಿಕೆಯಿಂದ ದಶಕಗಳ ವಿವಾದವನ್ನು ಬಗೆಹರಿಸಿಕೊಂಡಲ್ಲಿ ಸಂಬಂಧಗಳೂ ಒಂದಷ್ಟು ಮಟ್ಟಿಗೆ ಸುಧಾರಿಸಲು ಸಾಧ್ಯವಿದೆ ಎಂಬುದು ಕೋರ್ಟ್ ನ ಅಭಿಪ್ರಾಯವಾಗಿದೆ.