ಚೆನ್ನೈಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ತಮಿಳು ನಾಡು ನಾಯಕರು ಸ್ವಾಗತಿಸಿದ ಸಂದರ್ಭ
ದೇಶ
ದೇಶವನ್ನು ಮುನ್ನಡೆಸುವ ತಾಕತ್ತು ಇರುವುದು ನರೇಂದ್ರ ಮೋದಿಯವರಿಗೆ ಮಾತ್ರ; ಕೆ ಪಳನಿಸ್ವಾಮಿ
ಕಲಬುರಗಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿಂದ ತಮಿಳು ನಾಡಿನ ಚೆನ್ನೈಗೆ ಹೋದರು. ನಿನ್ನೆ ತಮಿಳುನಾಡಿನ ಪ್ರಚಾರ ಸಭೆಯಲ್ಲಿ ...
ಚೆನ್ನೈ: ಕಲಬುರಗಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿಂದ ತಮಿಳು ನಾಡಿನ ಚೆನ್ನೈಗೆ ಹೋದರು. ನಿನ್ನೆ ತಮಿಳುನಾಡಿನ ಪ್ರಚಾರ ಸಭೆಯಲ್ಲಿ ಎಐಎಡಿಎಂಕೆ ಮತ್ತು ಪಿಎಂಕೆ ಜೊತೆ ಬಿಜೆಪಿ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಿದೆ. ಸಭೆಯಲ್ಲಿ ಪ್ರಧಾನಿ ಮಾಜಿ ಮುಖ್ಯಮಂತ್ರಿಗಳಾದ ಎಂಜಿ ರಾಮಚಂದ್ರನ್, ಜೆ ಜಯಲಲಿತಾ ಮತ್ತು ಕಾಂಗ್ರೆಸ್ ನಾಯಕ ಕೆ ಕಾಮರಾಜ ಅವರನ್ನು ಸಹ ಹೊಗಳಿದರು.
ತಮಿಳುನಾಡಿನ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಎನ್ ಡಿಎ ಅಧಿಕಾರಕ್ಕೆ ಬಂದರೆ ಎಂಜಿ ರಾಮಚಂದ್ರನ್ ಅವರ ಹೆಸರಿಡುವುದಾಗಿ ಹೇಳಿದರು.
ತಮ್ಮ ಭಾಷಣದುದ್ದಕ್ಕೂ ತಮಿಳಿಗರನ್ನು ಸಂತೋಷಿಸಲು ಯತ್ನಿಸಿದ ಪ್ರಧಾನಿ ತಮ್ಮ ಸರ್ಕಾರ ರಾಜ್ಯ ಮೂಲದ ವಿಮಾನಗಳಲ್ಲಿ ತಮಿಳಿನಲ್ಲಿ ಘೋಷಣೆ ತರುವುದನ್ನು ಪರಿಗಣಿಸುವುದಾಗಿ ಹೇಳಿದರು. ನಿನ್ನೆ ಪ್ರಧಾನಿಯವರ ಭೇಟಿಗೆ ಸಹಜವಾಗಿಯೇ ವಿರೋಧ ಪಕ್ಷಗಳಿಂದ ಟೀಕೆಗಳು ವ್ಯಕ್ತವಾಗಿದ್ದವು. ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಕನಸಿನಂತೆ ತಮಿಳು ನಾಡನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರ ಸತತ ಪ್ರಯತ್ನ ಮುಂದುವರಿಸುತ್ತಿದೆ ಎಂದರು.
ಎಂಜಿಆರ್ ಅವರು ಭಾರತದ ಒಬ್ಬ ಅತ್ಯಂತ ಗೌರವಾನ್ವಿತ ವ್ಯಕ್ತಿ. ಅವರು ಚಿತ್ರರಂಗ ಮತ್ತು ಜನರ ಹೃದಯವನ್ನು ಗೆದ್ದವರು. ಸಮಾಜದ ಕೆಳವರ್ಗದವರ ಉದ್ಧಾರಕ್ಕಾಗಿ ಸತತ ದುಡಿಯುತ್ತಿದ್ದರು. ಅವರ ಸಾಮಾಜಿಕ ಅಭಿವೃದ್ಧಿ ಕೆಲಸಗಳಿಂದ ತಮಿಳುನಾಡಿನ ಬಹಳ ಸಹಾಯವಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ