ನಿಷೇಧಿತ ಉಗ್ರ ಸಂಘಟನೆಗಳನ್ನು ಹೈ-ರಿಸ್ಕ್ ಪಟ್ಟಿಗೆ ಸೇರಿಸಲು ಪಾಕಿಸ್ತಾನ ಮುಂದು!

ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗ ಉಂಟಾಗಿದ್ದು, ಪುಲ್ವಾಮ ದಾಳಿಯ ನಂತರ ಉಗ್ರ ಸಂಘಟನೆಗಳ ವಿರುದ್ಧ ಮೇಲ್ನೋಟಕ್ಕೆ
ನಿಷೇಧಿತ ಉಗ್ರ ಸಂಘಟನೆಗಳನ್ನು ಹೈ-ರಿಸ್ಕ್ ಪಟ್ಟಿಗೆ ಸೇರಿಸಲು ಮುಂದಾದ ಪಾಕಿಸ್ತಾನ!
ನಿಷೇಧಿತ ಉಗ್ರ ಸಂಘಟನೆಗಳನ್ನು ಹೈ-ರಿಸ್ಕ್ ಪಟ್ಟಿಗೆ ಸೇರಿಸಲು ಮುಂದಾದ ಪಾಕಿಸ್ತಾನ!
ಇಸ್ಲಾಮಾಬಾದ್: ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗ ಉಂಟಾಗಿದ್ದು, ಪುಲ್ವಾಮ ದಾಳಿಯ ನಂತರ ಉಗ್ರ ಸಂಘಟನೆಗಳ ವಿರುದ್ಧ ಮೇಲ್ನೋಟಕ್ಕೆ ಒಂದಷ್ಟು ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ. 
ಜೈಶ್-ಎ-ಮೊಹಮ್ಮದ್ (ಜೆಇಎಂ), ಜಮಾತ್-ಉದ್ ದವಾ, ಎಫ್ಐಎಫ್ ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಈಗಾಗಲೇ ನಿಷೇಧಿಸಿದೆ. ಆದರೆ ಭಯೋತ್ಪಾದಕರಿಗೆ ಆರ್ಥಿಕತೆಗೆ ಸಹಕಾರ ಸಿಗದಂತೆ ಜಾಗತಿಕ ಮಟ್ಟದಲ್ಲಿ ಎಚ್ಚರ ವಹಿಸುತ್ತಿರುವ ಹಣಕಾಸು ವಿಚಕ್ಷಣ ಕಾರ್ಯಪಡೆ (ಎಫ್‌ಎಟಿಎಫ್) ಪಾಕಿಸ್ತಾನದ ಕ್ರಮದಿಂದ ಸಮಾಧಾನಗೊಂಡಿಲ್ಲ. 
ಪಾಕ್ ಈ ಉಗ್ರ ಸಂಘಟನೆಗಳನ್ನು ನಿಷೇಧಿಸಿದೆಯಾದರೂ ಅವುಗಳನ್ನು ಕಡಿಮೆ ಅಥವಾ ಮಧ್ಯಮ ರಿಸ್ಕ್ ಇರುವ ಉಗ್ರ ಸಂಸ್ಥೆಗಳೆಂದು ಗುರುತಿಸುತ್ತಿದೆ ಎಂಬುದು ಎಫ್ಎಟಿಎಫ್ ನ ಆಕ್ಷೇಪವಾಗಿದೆ. ಈ ಹಿನ್ನೆಲೆಯಲ್ಲಿ ಎಫ್ ಎಟಿಎಫ್ ನಿಯಮಗಳ ಅನುಸಾರವಾಗಿ ಪಾಕಿಸ್ತಾನ ಈಗಾಗಲೇ ನಿಷೇಧಿಸಿರುವ ಉಗ್ರ ಸಂಘಟನೆಗಳನ್ನು ಹೈ ರಿಸ್ಕ್ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ಪಾಕಿಸ್ತಾನ ಗುರುತಿಸಿರುವ ಹೈ-ರಿಸ್ಕ್ ಉಗ್ರ ಸಂಘಟನೆಗಳನ್ನು ಆಡಳಿತಾತ್ಮಕ, ತನಿಖಾ, ಹಣಕಾಸು ಇಲಾಖೆಗಳಿಂದ ಮತ್ತಷ್ಟು ಕಠಿಣ ತಪಾಸಣೆಗೆ ಒಳಪಡಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com