ಒಂದೇ ವರ್ಷದಲ್ಲಿ ಏಳು ಬಾರಿ ಭಾರತದೊಳಗೆ ನುಸುಳಿದ ಜೆಇಎಂ ಉಗ್ರರು

2017-18 ಅವಧಿಯಲ್ಲಿ ಜೈಷ್ ಇ- ಮೊಹಮ್ಮದ್ ಸಂಘಟನೆಯಿಂದ ಏಳು ಬಾರಿ ಅಕ್ರಮವಾಗಿ ಉಗ್ರರನ್ನು ಭಾರತದೊಳಗೆ ನುಸುಳಿಸಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ದಳ ಚಾರ್ಚ್ ಶೀಟ್ ನಲ್ಲಿ ತಿಳಿಸಿದೆ.
ಎನ್ ಐಎ
ಎನ್ ಐಎ
Updated on

ನವದೆಹಲಿ: 2017-18 ಅವಧಿಯಲ್ಲಿ ಜೈಷ್ ಇ- ಮೊಹಮ್ಮದ್ ಸಂಘಟನೆಯಿಂದ ಏಳು ಬಾರಿ ಅಕ್ರಮವಾಗಿ ಉಗ್ರರನ್ನು ಭಾರತದೊಳಗೆ ನುಸುಳಿಸಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ದಳ ಚಾರ್ಚ್ ಶೀಟ್ ನಲ್ಲಿ ತಿಳಿಸಿದೆ.

ಪಾಕಿಸ್ತಾನದ ಮೂಲದ ಜೈಷ್ -ಇ- ಮೊಹಮ್ಮದ್ ಉಗ್ರ ಸಂಘಟನೆ ಅಕ್ಟೋಬರ್ 23, 2017 ರಿಂದ ಸೆಪ್ಟೆಂಬರ್ 2018ರವರೆಗೂ ಭಾರತದೊಳಗೆ  ಏಳು ಬಾರಿ ತರಬೇತಿ ಪಡೆದ ಹಾಗೂ ಶಸ್ತ್ರ ಸಜ್ಜಿತ ಉಗ್ರರನ್ನು ನುಸುಳಿಸಲಾಗಿತ್ತು ಎಂದು ವಿಚಾರಣೆ ವೇಳೆಯಲ್ಲಿ ತಿಳಿದುಬಂದಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಚ್ ಶೀಟ್ ನಲ್ಲಿ ಹೇಳಲಾಗಿದೆ.

ಕತ್ವಾ ಸಾಂಬಾ ವಲಯದಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿಸಲಾಗುತಿತ್ತು.ಜಿಇಎಂ ಸಂಘಟನೆ ಭಾರತದ ವಿರುದ್ಧ ಯುದ್ಧಕ್ಕೆ ಪಿತೂರಿ ನಡೆಸಿತ್ತು ಎಂಬುದು  ತನಿಖೆ ವೇಳೆ ತಿಳಿಬಂದಿದೆ.

ರಾಷ್ಟ್ರೀಯ ತನಿಖಾ ದಳ ಬಂಧಿಸಿರುವ ಶಂಕಿತ ಉಗ್ರರಾದ ಮೊಹಮ್ಮದ್ ಇಕ್ಬಲ್ ರಾಥೆರ್,  ಮತ್ತು ರಿಯಾಜ್ ಅಹ್ಮದ್  ನೆಂಗ್ರೂವೊ  ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಮತ್ತೋಬ್ಬ ಶಂಕಿತ ಅಶಾಕ್ ಅಹ್ಮದ್ ನೆನ್ ಗ್ರೋ  ತಪ್ಪಿಸಿಕೊಂಡಿದ್ದಾನೆ.
ರಾಥೆರ್  ಕಾಶ್ಮೀರದಲ್ಲಿನ ವೈದ್ಯಕೀಯ ಸಂಸ್ಥೆಯೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದರೆ, ನೆಂಗ್ರೂವೊ ಸಹೋದರರು ವೃತ್ತಿಯಲ್ಲಿ ಟ್ರಕ್ ಚಾಲಕರಾಗಿದ್ದಾರೆ. ಅಶಾಕ್ ಅಹ್ಮದ್ ನೆನ್ ಗ್ರೋ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com