2019 'ಲೋಕ'ಸಮರ ದಿನಾಂಕ ನಿಗದಿ: 7 ಹಂತಗಳಲ್ಲಿ ಚುನಾವಣೆ; ಏ.11ಕ್ಕೆ ಮೊದಲ ಹಂತದ ಮತದಾನ, ಮೇ.23ಕ್ಕೆ ಫಲಿತಾಂಶ
2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾ.10 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ
2019 ಲೋಕಸಭಾ ಚುನಾವಣೆಗೆ ದಿನಾಂಗ ನಿಗದಿ 7 ಹಂತಗಳಲ್ಲಿ ಚುನಾವಣೆ ಮೇ.23 ಕ್ಕೆ ಫಲಿತಾಂಶ
ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾ.10 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.
ದೆಹಲಿ ವಿಜ್ಞನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, 2019 ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ದೇಶಾದ್ಯಂತ ಒಟ್ಟಾರೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
Phase 1 - 91 consti. in 20 states to go to polls phase 2 - 97 consti. in 13 states phase 3 - 115 consti. in 14 states phase 4 - 71 consti. in 9 states phase 5 - 51 consti. in 7 states phase 6 - 59 consti. in 7 states phase 7 - 59 consti. in 8 states#LokSabhaElection2019pic.twitter.com/GNvcMMV3a5
ಏ. ರಂದು 11 ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್18 ರಂದು 2 ನೇ ಹಂತದ ಮತದಾನ, ಏ. 23 ರಂದು 3 ನೇ ಹಂತದ ಮತದಾನ, ಏ.29 ರಂದು 4 ನೇ ಹಂತದ ಮತದಾನ, ಮೇ.6 ರಂದು 5ನೇ ಹಂತ ಮೇ.12 ರಂದು 6ನೇ ಹಂತ ಮೇ.19 ರಂದು 7 ನೇ ಹಂತದ ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ ಏ.18, 23 ರಂದು ಚುನಾವಣೆ
ಕರ್ನಾಟಕದ ಒಟ್ಟು 28 ಕ್ಷೇತ್ರಗಳಲ್ಲಿ 2 ಹಂತದ ಚುನಾವಣೆ ನಡೆಯಲಿದ್ದು, ಏ.18 ಹಾಗೂ ಏ.23 ರಂದು 2 ಹಂತಗಳಲ್ಲಿ ತಲಾ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಈ ಬಾರಿಯ ಲೋಕಸಭಾ ಚುನಾವಣೆಯ ವಿಶೇಷತೆಗಳೇನು?
ದೇಶಾದ್ಯಂತ 10 ಲಕ್ಷ ಮತಗಟ್ಟೆಗಳು
8.4 ಕೋಟಿ ಹೊಸ ಮತದಾರರ ಸೇರ್ಪಡೆ
ಒಟ್ಟಾರೆ 90 ಕೋಟಿ ಮತದಾರರು
ಎಲ್ಲಾ ಕಡೆ ವಿವಿಪ್ಯಾಟ್
ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಫೋಟೋ
ನೀತಿ ಸಂಹಿತೆ ಉಲ್ಲಂಘನೆಯಾದರೆ ಸಿ-ವಿಜಿಲ್ ಮೊಬೈಲ್ ಆಪ್ ಮೂಲಕ ಅಧಿಕಾರಿಗಳ ಗಮನಕ್ಕೆ ತರಲು ಅವಕಾಶ (ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಪ್ರಯೋಗವಾಗಿತ್ತು)
ಆಪ್ ಮೂಲಕ ದೂರು ಸಲ್ಲಿಸಿದವರಿಗೆ 100 ನಿಮಿಷಗಳಲ್ಲಿ ಅಧಿಕಾರಿಗಳಿಂದ ದೂರಿನ ಕುರಿತು ಕ್ರಮಕೈಗೊಂಡ ಬಗ್ಗೆ ಮಾಹಿತಿ
ಮತದಾನ ಮಾಡುವ ದಿವ್ಯಾಂಗರಿಗೆ ವಿಶೇಷ ಸೌಲಭ್ಯ: ನೋಂದಣಿ ಮಾಡಲು ಆಪ್
24 ಗಂಟೆಗಳ ಕಾಲ ಹೆಲ್ಪ್ ಲೈನ್- ಹೆಲ್ಪ್ ಲೈನ್ ಸಂಖ್ಯೆ-1950
ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಜಾಹಿರಾತು
ಬೆಳಿಗ್ಗೆ 10 ರಿಂದ-10-6 ವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ