ಒಮರ್ ಅಬ್ದುಲ್ಲಾ
ದೇಶ
ಜಮ್ಮು-ಕಾಶ್ಮೀರ ಆಸೆಂಬ್ಲಿಗೆ ಚುನಾವಣೆ ಇಲ್ಲ: ಮೋದಿ ಪಾಕಿಸ್ತಾನಕ್ಕೆ ಶರಣಾಗತಿ- ಒಮರ್
ಕಣಿವೆ ರಾಜ್ಯ ಜಮ್ಮು- ಕಾಶ್ಮೀರ ಆಸೆಂಬ್ಲಿ ಚುನಾವಣೆಯನ್ನು ಲೋಕಸಭೆ ಚುನಾವಣೆ ಜೊತೆಗೆ ನಡೆಸದಿರುವುದರಿಂದ ಪ್ರಧಾನಿ ಮೋದಿ ಪಾಕಿಸ್ತಾನ, ಉಗ್ರರು ಹಾಗೂ ಪ್ರತ್ಯೇಕತವಾದಿಗಳ ಮುಂದೆ ಶರಣಾಗಿದ್ದಾರೆ ಎಂದು ನ್ಯಾಷನಲ್ ಕಾನ್ಪರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
ಜಮ್ಮು-ಕಾಶ್ನೀರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರ ಆಸೆಂಬ್ಲಿ ಚುನಾವಣೆಯನ್ನು ಲೋಕಸಭೆ ಚುನಾವಣೆ ಜೊತೆಗೆ ನಡೆಸದಿರುವುದರಿಂದ ಪ್ರಧಾನಿ ಮೋದಿ ಪಾಕಿಸ್ತಾನ, ಉಗ್ರರು ಹಾಗೂ ಪ್ರತ್ಯೇಕತವಾದಿಗಳ ಮುಂದೆ ಶರಣಾಗಿದ್ದಾರೆ ಎಂದು ನ್ಯಾಷನಲ್ ಕಾನ್ಪರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
ಜಮ್ಮು- ಕಾಶ್ಮೀರ ಸೇರಿದಂತೆ ದೇಶಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಘೋಷಿಸಿದೆ. ಆದರೆ, ಭದ್ರತೆ ಕಾರಣ ಜಮ್ಮು ಮತ್ತು ಕಾಶ್ಮೀರ ಆಸೆಂಬ್ಲಿ ಚುನಾವಣೆಯನ್ನು ಲೋಕಸಭೆ ಚುನಾವಣೆ ಜೊತೆಗೇ ನಡೆಸಲು ಹಿಂದೇಟು ಹಾಕಿದೆ.
ಭದ್ರತೆಯ ಕಾರಣದಿಂದಾಗಿ ಅನಂತ್ ನಾಗರ್ ಲೋಕಸಭಾ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಆಯೋಗ ಹೇಳಿಕೆ ನೀಡಿದೆ.
ಜಮ್ಮು- ಕಾಶ್ಮೀರ ಆಸೆಂಬ್ಲಿಗೆ ನಿಗದಿತ ವೇಳೆಯಲ್ಲಿ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಒಮರ್ ಅಬ್ದುಲ್ಲಾ, 56 ಇಂಚಿನ ಮೋದಿ ವಿಫಲರಾಗಿದ್ದಾರೆ. ವೆಲ್ ಡನ್ ಮೋದಿ ಸಾಹಿಬ್, ಮೋದಿ ಪಾಕಿಸ್ತಾನ, ಉಗ್ರರು ಹಾಗೂ ಹುರಿಯತ್ ಗೆ ತಲೆಬಾಗಿದ್ದಾರೆ ಎಂದು ಟೀಕಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ