'ರಂಜಾನ್ ವೇಳೆ ಮತದಾನ' ಹೇಳಿಕೆ ಅನಗತ್ಯ, ಮುಸ್ಲಿಮರನ್ನು ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ: ಟಿಎಂ ಸಿಗೆ ಒವೈಸಿ
'ರಂಜಾನ್ ವೇಳೆ ಮತದಾನ' ಹೇಳಿಕೆ ಅನಗತ್ಯ, ಮುಸ್ಲಿಮರನ್ನು ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ: ಟಿಎಂ ಸಿಗೆ ಒವೈಸಿ

'ರಂಜಾನ್ ವೇಳೆ ಮತದಾನ' ಹೇಳಿಕೆ ಅನಗತ್ಯ, ಮುಸ್ಲಿಮರ ಬಳಕೆ ನಿಲ್ಲಿಸಿ: ಟಿಎಂ ಸಿಗೆ ಒವೈಸಿ

ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದ ಅಚ್ಚರಿ ಉಂಟುಮಾಡುತ್ತಿರುವ ಎಂಐಎಂ ಪಕ್ಷದ ಮುಖ್ಯಸ್ಥ ಈಗ ರಂಜಾನ್ ವೇಳೆ ಲೋಕಸಭಾ ಚುನಾವಣೆ ವಿವಾದವನ್ನು ಅನಗತ್ಯ ಎಂದಿದ್ದಾರೆ.
Published on
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದ ಅಚ್ಚರಿ ಉಂಟುಮಾಡುತ್ತಿರುವ ಎಂಐಎಂ ಪಕ್ಷದ ಮುಖ್ಯಸ್ಥ ಈಗ ರಂಜಾನ್ ವೇಳೆ ಲೋಕಸಭಾ ಚುನಾವಣೆ ವಿವಾದವನ್ನು ಅನಗತ್ಯ ಎಂದಿದ್ದಾರೆ.
ಉತ್ತರ ಪ್ರದೆಶ, ಪಶ್ಚಿಮ ಬಂಗಾಳ, ಬಿಹಾರ್ ರಾಜ್ಯಗಳಲ್ಲಿ ರಂಜಾನ್ ವೇಳೆಯೇ ಲೋಕಸಭೆಗೆ ಮತದಾನ ನಡೆಯಲಿದೆ ಇದರಿಂದ ಅಲ್ಪಸಂಖ್ಯಾತರಿಗೆ ಮತದಾನ ಮಾಡುವುದಕ್ಕೆ ಅಡ್ಡಿ ಉಂಟಾಗಲಿದೆ ಎಂದು ಕೋಲ್ಕತ್ತಾ ಮೇಯರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಒವೈಸಿ ಪ್ರತಿಕ್ರಿಯೆ ನೀಡಿದ್ದು, ಇಡೀ ವಿವಾದ ಅನಗತ್ಯವಾದದ್ದು, ನಿಮ್ಮ ಕಾರಣಗಳಿಗಾಗಿ ಮುಸ್ಲಿಂ ಸಮುದಾಯ ಹಾಗೂ ರಂಜಾನ್ ನ್ನು ಎಳೆದು ತರಬೇಡಿ ಎಂದು ಆ ರಾಜಕೀಯ ಪಕ್ಷಗಳಿಗೆ (ತೃಣಮೂಲ ಕಾಂಗ್ರೆಸ್) ಗೆ ಮನವಿ ಮಾಡುತ್ತೆನೆ ಎಂದು ಹೇಳಿದ್ದಾರೆ. 
ರಂಜಾನ್ ವೇಳೆ ಮುಸ್ಲಿಮರು ಉಪವಾಸ ಮಾಡುತ್ತಾರೆ, ಹೊರಗೆ ಓಡಾಡುತ್ತಾರೆ, ಕಚೇರಿಗೆ ಹೋಗುತ್ತಾರೆ. ಸಹಜ ಜೀವನ ನಡೆಸುತ್ತಾರೆ, ಅತಿ ಬಡವರೂ ಸಹ ರಂಜಾನ್ ಉಪವಾಸ ಮಾಡುತ್ತಾರೆ. ರಂಜಾನ್ ವೇಳೆ ವಾಸ್ತವವಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಮತದಾನ ಮಾಡುತ್ತಾರೆ, ಏಕೆಂದರೆ ಅವರೆಲ್ಲಾ ಪ್ರಾಪಂಚಿಕ ಕರ್ತವ್ಯಗಳಿಂದ ಒಂದಷ್ಟು ಬಿಡುವು ಹೊಂದಿರುತ್ತಾರೆ ಎಂದು ಒವೈಸಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com