ಲೋಕಸಭಾ ಸಮರ: ಮಹಾತ್ಮ ಗಾಂಧಿ ಭಾರತ, ಗೋಡ್ಸೆ ಭಾರತ ನಡುವೆ ಆಯ್ಕೆ- ರಾಹುಲ್

ಲೋಕಸಭಾ ಚುನಾವಣೆಯಲ್ಲಿ ಪ್ರೀತಿಸುವ ಮಹಾತ್ಮಗಾಂಧಿ ಭಾರತ ಹಾಗೂ ದ್ವೇಷ ಕಾರುವ ಗೋಡ್ಸೆ ಭಾರತ ನಡುವೆ ಆಯ್ಕೆ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ:  ಲೋಕಸಭಾ ಚುನಾವಣೆಯಲ್ಲಿ ಪ್ರೀತಿಸುವ ಮಹಾತ್ಮಗಾಂಧಿ ಭಾರತ  ಹಾಗೂ ದ್ವೇಷ ಕಾರುವ ಗೋಡ್ಸೆ ಭಾರತ ನಡುವೆ ಆಯ್ಕೆ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಫೆಲ್ ಒಪ್ಪಂದ, ಉದ್ಯೋಗ ಸೃಷ್ಟಿ, ರಾಷ್ಟ್ರೀಯ ಭದ್ರತೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾತ್ಮ ಗಾಂಧಿ ಭಾರತ ಬೇಕೋ ಅಥವಾ ಗೊಡ್ಸೆ ಭಾರತ ಬೇಕೋ ನಿವೇ ನಿರ್ಧರಿಸಿ. ಒಂದು ಕಡೆ ಪ್ರೀತಿ, ಸಹೋದರತ್ವ ಭಾವನೆಗಳಿದ್ದರೆ ಮತ್ತೊಂದೆಡೆ ದ್ವೇಷ, ಭಯವಿದೆ. ಭಯಪಡದ ಗಾಂಧೀಜಿ ಅನೇಕ ವರ್ಷಗಳ ಕಾಲ ಜೈಲಿನಲ್ಲಿದ್ದರು ಆದರೆ, ಬ್ರಿಟಿಷರೊಂದಿಗೆ ಪ್ರೀತಿಯೊಂದಿಗೆ ಮಾತನಾಡುತ್ತಿದ್ದರು.ಮತ್ತೊಂದೆಡೆ ವೀರ ಸರ್ವಕರ್ ಜೈಲಿನಿಂದ ಬಿಡುಗಡೆಗೊಳಿಸುವಂತೆ ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆಯುತ್ತಿದ್ದರು ಎಂದು ಹೇಳಿದರು.

ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುವ ಮೋದಿಯ ಶರ್ಟ್, ಷೂ, ಪೋನ್ , ಸೆಲ್ಫಿ ತೆಗೆದುಕೊಳ್ಳುವುದು ಎಲ್ಲವೂ ಚೀನಾದಲ್ಲಿ ಇರುತ್ತದೆ. ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್  ಯೋಧರನ್ನು ಹತ್ಯೆ ಮಾಡಿದ ಜೈಷ್- ಇ- ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಅವರನ್ನು ಬಿಜೆಪಿ ಆಡಳಿತಾವಧಿಯಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com