ಸಂಜೋತ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು: ಮಾ.14 ಕ್ಕೆ ವಿಚಾರಣೆ ಮುಂದೂಡಿಕೆ

ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಬೇಕಿದ್ದ ದಿನವೇ ಮಹತ್ವದ ತಿರುವು ದೊರೆತಿದ್ದು, ಹರ್ಯಾಣದ ಪಂಚಕುಲ ಕೋರ್ತ್ ವಿಚಾರಣೆಯನ್ನು ಮಾ.14 ಕ್ಕೆ ಮುಂದೂಡಿದೆ.
ಸಂಜೋತ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು: ಮಾ.14 ಕ್ಕೆ ವಿಚಾರಣೆ ಮುಂದೂಡಿಕೆ
ಸಂಜೋತ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು: ಮಾ.14 ಕ್ಕೆ ವಿಚಾರಣೆ ಮುಂದೂಡಿಕೆ
ಹರ್ಯಾಣ: ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಬೇಕಿದ್ದ ದಿನವೇ ಮಹತ್ವದ ತಿರುವು ದೊರೆತಿದ್ದು, ಹರ್ಯಾಣದ ಪಂಚಕುಲ ಕೋರ್ತ್ ವಿಚಾರಣೆಯನ್ನು ಮಾ.14 ಕ್ಕೆ ಮುಂದೂಡಿದೆ. 
ಪಾಕಿಸ್ತಾನದ ಮಹಿಳೆಯೊಬ್ಬರು ಈ ಪ್ರಕರಣದಲ್ಲಿ ಹೊಸ ಸಾಕ್ಷ್ಯ ಒದಗಿಸಲು ಮುಂದೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮಾ.14 ರಂದು ಮಹಿಳೆ ನೀಡಲಿರುವ ಸಾಕ್ಷ್ಯಾಧಾರವನ್ನು ಪರಿಶೀಲಿಸಿ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. 
12 ವರ್ಷಗಳ ಹಿಂದೆ ಅಂದರೆ 2007 ರ ಫೆ.18 ರಂದು ಹರ್ಯಾಣದ ಪಾನಿಪತ್ ನಲ್ಲಿ ಸಂಜೋತಾ ಎಕ್ಸ್ ಪ್ರೆಸ್ ನಲ್ಲಿ  ಬಾಂಬ್ ಸ್ಫೋಟಗೊಂಡು 68 ಜನರು ಸಾವನ್ನಪ್ಪಿದ್ದರು. ಬೇರೆ ಬೋಗಿಗಳಲ್ಲೂ ಎರಡು ಜೀವಂತ ಸೂಟ್​ಕೇಸ್ ಬಾಂಬ್​ಗಳು ಪತ್ತೆಯಾಗಿದ್ದವು. 2016 ರ ಡಿಸೆಂಬರ್ ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಅಸೀಮಾನಂದ ಜಾಮೀನು ಪಡೆದಿದ್ದರು. ಇತರ ಕೆಲವು ಆರೋಪಿಗಳು ಬಂಧನದಲ್ಲೇ ಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com