ಹೇಳಿದಂತೆ ಕೇಳದಿದ್ದರೆ ಜೀವನ ನರಕ, ರಾಕೇಶ್ ಅಸ್ತಾನ ಬೆದರಿಕೆ: ನ್ಯಾಯಾಲಯಕ್ಕೆ ಕ್ರಿಶ್ಚಿಯನ್ ಮೈಕೆಲ್ ಹೇಳಿಕೆ

ಜೈಲಿನೊಳಗೆ ಜೀವನ ನರಕ ಮಾಡುವುದಾಗಿ ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ತಮ್ಮಗೆ ಬೆದರಿಕೆ ಹಾಕಿದ್ದರು ಎಂದು ಈ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಆರೋಪಿಸಿದ್ದಾರೆ.
ಕ್ರಿಶ್ಚಿಯನ್ ಮೈಕೆಲ್
ಕ್ರಿಶ್ಚಿಯನ್ ಮೈಕೆಲ್

ನವದೆಹಲಿ:  ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ನಡೆಸುತ್ತಿದ್ದ ಸಿಬಿಐ ಹೇಳಿದಂತೆ ಕೇಳದಿದ್ದರೆ ಜೈಲಿನೊಳಗೆ ಜೀವನ ನರಕ ಮಾಡುವುದಾಗಿ  ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ತಮ್ಮಗೆ  ಬೆದರಿಕೆ ಹಾಕಿದ್ದರು ಎಂದು ಈ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಆರೋಪಿಸಿದ್ದಾರೆ.

 ಕೆಲ ದಿನಗಳ ಹಿಂದೆ ದುಬೈನಲ್ಲಿ ತಮ್ಮನ್ನು ಭೇಟಿ ಮಾಡಿದ ರಾಕೇಶ್ ಅಸ್ತಾನ, ಏನು ನಡೆಯುತ್ತಿದೆಯೂ ಅದಕ್ಕೆ ಸಂಬಂಧಿಸಿದಂತೆ ಹೇಳಿದಂತೆ ಕೇಳದಿದ್ದರೆ ಜೀವನ ನರಕ ಮಾಡುವುದಾಗಿ ಬೆದರಿಸಿದ್ದರು. ನನ್ನ ಮುಂದಿನ ಬಾಗಿಲು ಚೋಟಾ ರಾಜನ್, ಅನೇಕ ಜನರನ್ನು ಕೊಂದಿರುವ ಚೋಟಾ ರಾಜನ್ ಜೊತೆಗೆ ನಾನು ಯಾವ ಅಪರಾಧ ಮಾಡುತ್ತೇನೋ ಎಂಬುದು ಗೊತ್ತಿಲ್ಲ ಎಂದಿದ್ದರು ಎಂದು ಮೈಕೆಲ್ ತಿಳಿಸಿದ್ದಾನೆ.

16ರಿಂದ 17 ಕಾಶ್ಮೀರಿ ಪ್ರತ್ಯೇಕತವಾದಿ ಮುಖಂಡರೊಂದಿಗೆ ತಮ್ಮನ್ನು ಜೈಲಿನಲ್ಲಿಡಲಾಗಿತ್ತು ಎಂದು ಆತ ನ್ಯಾಯಾಲಯದಲ್ಲಿ ಹೇಳಿದ್ದಾನೆ. ತಿಹಾರ್ ಜೈಲಿನಲ್ಲಿ ಇಡಿ ವಿಚಾರಣೆಗಾಗಿ  ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವಕಾಶ ಕಲ್ಪಿಸಿದ ನಂತರ ಮೈಕೆಲ್ ಈ  ರೀತಿಯ ಹೇಳಿಕೆ ನೀಡಿದ್ದಾನೆ.

ತನಿಖಾ ತಂಡ ನಾಳೆ ಹಾಗೂ ನಾಡಿದ್ದು ಆತನನನ್ನು ವಿಚಾರಣೆ ನಡೆಸಲಿದೆ ಎಂದು ನ್ಯಾಯಾಲಯ ಹೇಳಿದೆ.  ಬೆಳಗ್ಗೆ ಹಾಗೂ ಸಂಜೆ ಅರ್ಧ ಗಂಟೆ ವಿಚಾರಣೆ ನಡೆಯಲಿದ್ದು, ಮೈಕೆಲ್ ಪರ ವಕೀಲರು ಹಾಗೂ ಜೈಲು ಅಧಿಕಾರಿಗಳಿಗೂ ಮಿತ ಅವಧಿಯ ಅವಕಾಶ ಕಲ್ಪಿಸಿದೆ.

ಜೈಲಿನೊಳಗೆ ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಮೈಕೆಲ್  ಸಲ್ಲಿಸಿದ ದೂರನ್ನು ಆಲಿಸಿದ ನ್ಯಾಯಾಲಯ, ಸಿಸಿಟಿವಿ ದೃಶ್ಯಾವಳಿಗಳನ್ನು ಹಾಜರುಪಡಿಸುವಂತೆ ಗುರುವಾರದೊಳಗೆ ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com