ಭಯೋತ್ಪಾದನೆ ನಿಗ್ರಹಕ್ಕೆ ಮನಮೋಹನ್‌ ಸಿಂಗ್ ಕಠಿಣ ಕ್ರಮ ಕೈಗೊಂಡಿರಲಿಲ್ಲ: ಶೀಲಾ ದೀಕ್ಷಿತ್ ಹೇಳಿಕೆಗೆ 'ಶಾ' ಮೆಚ್ಚುಗೆ

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ಕೈಗೊಂಡ ದಿಟ್ಟ ಕ್ರಮಗಳನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಕೈಗೊಂಡಿರಲಿಲ್ಲ ಎಂದು ದೆಹಲಿ ...
ಶೀಲಾ ದೀಕ್ಷಿತ್
ಶೀಲಾ ದೀಕ್ಷಿತ್
Updated on
ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ಕೈಗೊಂಡ ದಿಟ್ಟ ಕ್ರಮಗಳನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಕೈಗೊಂಡಿರಲಿಲ್ಲ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥೆ ಶೀಲಾ ದೀಕ್ಷಿತ್ ಹೇಳಿಕೊಂಡಿದ್ದಾರೆ. 
26 / 11 ಮುಂಬಯಿ ದಾಳಿಯ ಬಳಿಕ ಭಯೋತ್ಪಾದನೆ ಬಗ್ಗೆ ವ್ಯವಹರಿಸುವಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಈಗಿನ ಪ್ರಧಾನಿಯಷ್ಟು ಬಲವಾದ ಹಾಗೂ ನಿರ್ಧಾರಯುತವಾದ ಹೋರಾಟ ಮಾಡಲಿಲ್ಲ, ದಿಟ್ಟ ಕ್ರಮ ಕೈಗೊಂಡಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಶೀಲಾ ದೀಕ್ಷಿತ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಶೀಲಾ ದೀಕ್ಷಿತ್ ಹೇಳಿಕೆಗೆ ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಧನ್ಯವಾದ ಹೇಳಿದ್ದಾರೆ. ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದವರು ನೀಡಿರುವ ಹೇಳಿಕೆ ಬಗ್ಗೆ ಶಾ ಮೆಚ್ಚುಗೆ ಸೂಚಿಸಿದ್ದಾರೆ.
ಈ ಸಂಬಂದ ಟ್ವೀಟ್ ಮಾಡಿರುವ ಶೀಲಾ ದೀಕ್ಷಿತ್, ಥ್ಯಾಂಕ್ಯೂ ಶೀಲಾ ಜೀ, ಈಗಾಗಲೇ ದೇಶದ ಜನರಿಗೆ ಇದರ ಬಗ್ಗೆ ತಿಳಿದಿದೆ, ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅಮಿತ್ ಶಾ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com