ಜಾಹೀರಾತಿಗಾಗಿ ಪ್ರಧಾನಿ ಮೋದಿಯಿಂದ 3044 ಕೋಟಿ ರು ಹಣ ಖರ್ಚು: ಮಾಯಾವತಿ

ಪ್ರಧಾನ ಮಂತ್ರಿ ಜಾಹೀರಾತುಗಳಿಗಾಗಿ ಸುಮಾರು 3044 ಕೋಟಿ ರು ಹಣ ಖರ್ಚು ಮಾಡಿದ್ದಾರೆ, ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಹಿಂದುಳಿದ ಗ್ರಾಮಗಳಲ್ಲಿ ಶಿಕ್ಷಣ..
ಮಾಯಾವತಿ
ಮಾಯಾವತಿ
Updated on: 
ಲಕ್ನೋ: ಪ್ರಧಾನ ಮಂತ್ರಿ  ಜಾಹೀರಾತುಗಳಿಗಾಗಿ  ಸುಮಾರು 3044 ಕೋಟಿ ರು ಹಣ ಖರ್ಚು ಮಾಡಿದ್ದಾರೆ, ಇಷ್ಟು ದೊಡ್ಡ ಪ್ರಮಾಣದ ಹಣವನ್ನು  ಹಿಂದುಳಿದ ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಗೆ ಬಳಸಿಕೊಳ್ಳಬೇಕಿತ್ತು ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ, ಉತ್ತರ ಪ್ರದೇಶದ ಹಲವು ಹಳ್ಳಿಗಳಲ್ಲಿ ಆಸ್ಪತ್ರೆ ಮತ್ತು ಶಿಕ್ಷಣ ಸೌಲಭ್ಯಗಳಿಲ್ಲ, ಅಭಿವೃದ್ಧಿಯಿಲ್ಲದೇ ಹಿಂದುಳಿದಿವೆ, ಆದರೆ ಬಿಜೆಪಿ ಮಾತ್ರ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ, ಜಾಹೀರಾತು ನೀಡುವುದರಲ್ಲೇ ಬ್ಯುಸಿಯಾಗಿದ್ದಾರೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಸಮಾಧಿಯಿಂದ ದೆವ್ವಗಳನ್ನು ಎಬ್ಬಿಸಿ ಕರೆತರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com