ಪುಲ್ವಾಮ ದಾಳಿಯ ಬೆನ್ನಲ್ಲೇ ಪಾಕಿಸ್ತಾನವನ್ನು ನಡುಗಿಸಿದ್ದ ಭಾರತೀಯ ನೌಕಾ ಪಡೆ!
ದೇಶ
ಪುಲ್ವಾಮ ದಾಳಿಯ ಬೆನ್ನಲ್ಲೇ ಪಾಕಿಸ್ತಾನವನ್ನು ನಡುಗಿಸಿದ್ದ ಭಾರತೀಯ ನೌಕಾ ಪಡೆ!
ಪುಲ್ವಾಮ ದಾಳಿಯ ಬೆನ್ನಲ್ಲೇ ಭಾರತ-ಪಾಕಿಸ್ತಾನದ ನಡುವೆ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯ ವೇಳೆ ಭಾರತೀಯ ನೌಕಾಪಡೆಯೂ ಪಾಕಿಸ್ತಾನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು.
ನವದೆಹಲಿ: ಪುಲ್ವಾಮ ದಾಳಿಯ ಬೆನ್ನಲ್ಲೇ ಭಾರತ-ಪಾಕಿಸ್ತಾನದ ನಡುವೆ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯ ವೇಳೆ ಭಾರತೀಯ ನೌಕಾಪಡೆಯೂ ಪಾಕಿಸ್ತಾನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು.
ಭಾರತ-ಪಾಕ್ ನಡುವಿನ ಪ್ರಕ್ಷುಬ್ಧ ಪರಿಸ್ಥಿತಿ ವೇಳೆ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ, ನ್ಯೂಕ್ಲಿಯರ್ ಸಬ್ ಮರೀನ್ ಹಾಗೂ ಇನ್ನೂ ಕೆಲವು ನಿರ್ಣಾಯಕ ನೌಕೆಗಳನ್ನು ಭಾರತೀಯ ನೌಕಾಪಡೆ ಕಾರ್ಯಾಚರಣೆಯಲ್ಲಿರಿಸಿತ್ತು. ಇದರಿಂದಾಗಿ ಪುಲ್ವಾಮ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಜಲ ಗಡಿಯಲ್ಲಿ ಬಾಲ ಬಿಚ್ಚದೇ ಇರುವಂತೆ ಮಾಡಿತ್ತು.
ನೌಕಾಪಡೆ ಅಧಿಕಾರಿಗಳು ಈ ಮಾಹಿತಿಯನ್ನು ಮಾ.18 ರಂದು ಬಹಿರಂಗಪಡಿಸಿದ್ದಾರೆ. ಫೆ.14 ರಂದು ಪುಲ್ವಾಮ ಘಟನೆಯಾದ ಬೆನ್ನಲ್ಲೇ ಭಾರತೀಯ ನೌಕಾಪಡೆಯ 60 ಹಡಗುಗಳು, ಭಾರತೀಯ ಕಡಲ ಕಾವಲಿಗಿರುವ ಪಡೆಯ 12 ಹಡಗುಗಳು, 80 ಯುದ್ಧವಿಮಾನಗಳನ್ನು ಕಾರ್ಯಾಚರಣೆ ಮೋಡ್ ನಲ್ಲೇ ಇರಿಸಲಾಗಿತ್ತು. ಎಲ್ಲಾ ಮೂರು ಆಯಾಮಗಳಲ್ಲೂ ಸಹ ಭಾರತೀಯ ಸೇನೆ ಫೆ.14 ರಂದೇ ಸರ್ವ ಸನ್ನದ್ಧತೆ ತೋರಿದ್ದು ಪಾಕಿಸ್ತಾನಕ್ಕೆ ನಡುಕ ಉಂಟಾಗಿತ್ತು. ಇದರಿಂದಾಗಿ ಪಾಕಿಸ್ತಾನ ಜಲಗಡಿಯಲ್ಲೂ ಬಾಲ ಬಿಚ್ಚುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ