ಆಮ್ ಆದ್ಮಿ-ಕಾಂಗ್ರೆಸ್ ಮೈತ್ರಿ ಕುರಿತು ರಾಹುಲ್ ಗೆ ಬರೆದ ಪತ್ರದಲ್ಲಿ ಶೀಲಾ ದೀಕ್ಷಿತ್ ಹೇಳಿದ್ದೇನು?

ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ್ಯೆ ಶೀಲಾ ದೀಕ್ಷಿತ್ ಪತ್ರ ಬರೆದಿದ್ದಾರೆ.
ಆಮ್ ಆದ್ಮಿ-ಕಾಂಗ್ರೆಸ್ ಮೈತ್ರಿ ಕುರಿತು ರಾಹುಲ್ ಗೆ ಬರೆದ ಪತ್ರದಲ್ಲಿ ಶೀಲಾ ದೀಕ್ಷಿತ್ ಹೇಳಿದ್ದೇನು?
ಆಮ್ ಆದ್ಮಿ-ಕಾಂಗ್ರೆಸ್ ಮೈತ್ರಿ ಕುರಿತು ರಾಹುಲ್ ಗೆ ಬರೆದ ಪತ್ರದಲ್ಲಿ ಶೀಲಾ ದೀಕ್ಷಿತ್ ಹೇಳಿದ್ದೇನು?
ನವದೆಹಲಿ: ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ್ಯೆ ಶೀಲಾ ದೀಕ್ಷಿತ್ ಪತ್ರ ಬರೆದಿದ್ದಾರೆ. 
ಶೀಲಾ ದೀಕ್ಷಿತ್ ಹಾಗೂ ಇತರ ಕಾರ್ಯಾಧ್ಯಕ್ಷರುಗಳಾದ ದೇವೇಂದ್ರ ಯಾದವ್, ರಾಜೇಶ್ ಲಿಲೊಥಿಯಾ, ಹರೂನ್ ಯುಸೂಫ್ ಕಳೆದ ವಾರ ಬರೆದಿದ್ದ ಪತ್ರದಲ್ಲಿ ಮೈತ್ರಿಗೆ ಮಾಡಿಕೊಳ್ಳುವುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಪಡಿಸಿದ್ದರು. 
ಕಾಂಗ್ರೆಸ್ ನಾಯಕರೊಬ್ಬರು ಶೀಲಾ ದೀಕ್ಷಿತ್ ನಿಲುವಿನ ಬಗ್ಗೆ ಮಾಹಿತಿ ನೀಡಿದ್ದು, ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷರುಗಳು ಆಪ್ ಜೊತೆಗಿನ ಮೈತ್ರಿ ದೀರ್ಘಾವಧಿಯಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದರು. ಅಷ್ಟೇ ಅಲ್ಲದೇ ಮೈತ್ರಿ ಸಂಬಂಧ ಕಾಂಗ್ರೆಸ್ ಪಕ್ಷದ ಆಪ್ ಮೂಲಕ  ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡುವುದಕ್ಕೂ ಶೀಲಾ ದೀಕ್ಷಿತ್ ಹಾಗೂ ಕಾರ್ಯಾಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದರು ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. 
ಆಪ್-ಕಾಂಗ್ರೆಸ್ ಮೈತ್ರಿ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವುದು ದೆಹಲಿ ಕಾಂಗ್ರೆಸ್ ನ ಉಸ್ತುವಾರಿ ಪಿಸಿ ಚಾಕೋ ಅವರ ಪ್ರಸ್ತಾವನೆಯಾಗಿತ್ತು. ಆದರೆ ಶೀಲಾ ದೀಕ್ಷಿತ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂಬ ಸಂಗತಿ ಈಗ ಬಹಿರಂಗವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com