
ಲಖನೌ: ಗಂಗಾ ದೋಣಿ ಯಾತ್ರೆಯ ಎರಡನೇ ದಿನವಾದ ಇಂದು ಉತ್ತರ ಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಾದೋಲಿಯಲ್ಲಿನ ಸೀತಾ ಸಮಹಿತಾ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, 70 ವರ್ಷದಿಂದ ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಟೀಕಿಸುವ ಬಿಜೆಪಿ ವಿರುದ್ಧ ಪ್ರತಿದಾಳಿ ನಡೆಸಿದರು. ಬಿಜೆಪಿ ಯಾವಾಗ ಅಧಿಕಾರಕ್ಕೆ ಬಂದಿತ್ತು, ಬಂದಾಗಿನಿಂದಲೂ ಏನೆಲ್ಲಾ ಮಾಡಿದ್ದೇ ಎಂಬುದನ್ನು ಹೇಳುವಂತೆ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿರುವ ಪ್ರಿಯಾಂಕಾ ಗಾಂಧಿ ಗಂಗ ನದಿಯ ಸಂಗಮ ಕ್ಷೇತ್ರದಿಂದ ನಿನ್ನೆಯಿಂದ ಮೂರು ದಿನಗಳ ಯಾತ್ರೆ ಆರಂಭಿಸಿದ್ದಾರೆ.ಪ್ರಯಾಗ್ ರಾಜ್ ನಿಂದ ಆರಂಭಗೊಂಡಿರುವ ಈ ಪ್ರಚಾರ ವಾರಾಣಸಿಯಲ್ಲಿ ಕೊನೆಯಾಗಲಿದೆ
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧವೂ ಮುಗಿ ಬಿದ್ದ ಪ್ರಿಯಾಂಕಾ, ರಿಪೋರ್ಟ್ ಕಾರ್ಡ್ , ಪ್ರಚಾರ, ಎಲ್ಲದರಲ್ಲೂ ಚೆನ್ನಾಗಿದೆ ಎಂದು ತೋರಿಸಲಾಗುತ್ತಿದೆ. ಆದರೆ, ವಾಸ್ತವಿಕವಾಗಿ ಏನೂ ಆಗಿಲ್ಲ, ನಾನು ಪ್ರತಿದಿನ ಭೇಟಿ ಮಾಡುತ್ತಿರುವ ಜನರೆಲ್ಲರೂ ಒತ್ತಡದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
Advertisement